ತಾವೋ ತಿಳಿವು #7 : ದುಡಿಯದಿರುವುದು ಸಹಜವಾದಾಗ…

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

11422711_1454980264802199_1031180472_n

ತ್ತಮರಿಗೆ ಮಹಾತ್ಮರ ಪಟ್ಟ ಸಿಕ್ಕಾಗ
ಉಳಿದ ಕಸುವನ್ನೂ ಕಳೆದುಕೊಳ್ಳುತ್ತಾರೆ ಜನ
ಆಸ್ತಿಯನ್ನು ಅಪೂರ್ವ ಎಂದಾಗ
ಕನ್ನ ಹಾಕಲು ಹಾತೊರೆಯುತ್ತಾರೆ ಜನ

ಸಂತ, ಸ್ವತಃ ಮುಂದೆ ನಿಂತು ;
ಜನ ಕಲಿತದ್ದನ್ನು ಖಾಲಿ ಮಾಡಿ
ಮೊಗೆದು ಮೊಗೆದು ತುಂಬುತ್ತಾನೆ ಖಾಲಿ
ಹೂವುಗಳನ್ನ ಚೂಟಿ ಚೂಟಿ
ಬೇರುಗಳಿಗೆ ಉಣಿಸುತ್ತಾನೆ ನೀರು
ಅಂಗಿಯೊಳಗೆ ಗುಂಗಿಯ ಹುಳ ಬಿಟ್ಟು
ದೊಂಬರಾಟದವನ ಮಾಡುತ್ತಾನೆ ತಬ್ಬಿಬ್ಬು

ದುಡಿಯದಿರುವುದು ಸಹಜವಾದಾಗ
ಎಲ್ಲ ಉಸಿರಾಟ ನಿರಾತಂಕ.

 

 

Leave a Reply