ತಾವೋ ತಿಳಿವು #9 : ಇರುವುದು ಇಲ್ಲದ ಜಾಗದಲ್ಲೆ…

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

tao

ಮೂವತ್ತು ತಂತಿ ಕಡ್ಡಿಗಳು
ಗಾಲಿಯ ಮಧ್ಯದಲ್ಲಿ ಒಂದಾದವು.
ಎಲ್ಲಿ ಗಾಲಿ ಉರುಳುವದಿಲ್ಲವೋ
ಅದೇ ಗಾಲಿಯನ್ನು ಉರುಳಿಸುತ್ತಿತ್ತು.

ಮಣ್ಣಿನ ಮುದ್ದೆಯ ಟೊಳ್ಳು ಮಾಡಿ
ಗಡಿಗೆ ಎಂದರು.
ಎಲ್ಲಿ ಗಡಿಗೆಯಿಲ್ಲವೊ
ಅಲ್ಲಿಯೇ ನೀರು ತುಂಬುವರು.

ಕಿಟಕಿ, ಬಾಗಿಲುಗಳ ಕೊರೆದು
ಕೋಣೆ ಎಂದರು.
ಎಲ್ಲಿ ಕೋಣೆ ಇಲ್ಲವೊ
ಅಲ್ಲಿಯೇ ಮಂದಿ ಮಲಗಿದರು.

ನೋಡಿ
ಇರುವುದು ಇರದ ಜಾಗದಲ್ಲೆ
ನಮ್ಮ ಲಾಭ
ಅಡಗಿ ಕೂತಿದೆ.

Leave a Reply