ತಾವೋ ತಿಳಿವು #11 : ನಿಜದ ನಾಯಕರಿವರು…

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ನಿಜದ ನಾಯಕರು
ಹಿಂಬಾಲಕರಿಗೂ ಅಪರಿಚಿತರು.
ಆಮೇಲೆ, ಜನ ಗೌರವಿಸುವ ನಾಯಕರು
ನಂತರ, ಜನರನ್ನು ಹೆದರಿಸುವವರು
ಜನರ ತಾತ್ಸಾರಕ್ಕೆ ಒಳಗಾದವರು ಕೊನೆಯವರು.

ಜನರನ್ನು ನಂಬದೇ ಹೋದರೆ
ಜನ ನಂಬಿಕೆ ಕಳೆದುಕೊಳ್ಳುತ್ತಾರೆ

ಉತ್ತಮರಿಗೆ ಮಾತಿಗಿಂತ
ಕೆಲಸದಲ್ಲಿ ಹೆಚ್ಚು ಹುರುಪು
ಅವರು ಕೆಲಸ ಮಾಡುವ ರೀತಿ
ಹೇಗಿರುತ್ತದೆಯೆಂದರೆ
ಜನರಿಗೆ ತಾವೇ ಕೆಲಸ ಮಾಡಿದಷ್ಟು ತೃಪ್ತಿ.

Leave a Reply