ತಾವೋ ತಿಳಿವು #28 ~ ಇವರು ತಾವೋದಲ್ಲಿ ಮಗ್ನರು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಅತ್ಯುತ್ತಮ ಕ್ರೀಡಾಪಟುವಿಗೆ
ಸರಿ ಸಮನಾದ ಸ್ಪರ್ಧಿಯ ಬಯಕೆ.

ಅತ್ಯುತ್ತಮ ದಂಡನಾಯಕನಿಗೆ
ವೈರಿಯ ಮನಸ್ಸನ್ನು ನಿಯಂತ್ರಿಸುವ ಇಚ್ಛೆ.

ಅತ್ಯುತ್ತಮ ವ್ಯಾಪಾರಿ
ಸುತ್ತ ಮುತ್ತಲಿನವರ ಹಿತವನ್ನು ಬಯಸುತ್ತಾನೆ.

ಅತ್ಯುತ್ತಮ ನಾಯಕ
ಜನರ ಅವಶ್ಯಕತೆಗಳನ್ನು ಹಿಂಬಾಲಿಸುತ್ತಾನೆ.

ಈ ಯಾರಿಗೂ ಸ್ಪರ್ಧೆಯ ಹಂಬಲವಿಲ್ಲ.
ಸ್ಪರ್ಧೆಯ ಬಗ್ಗೆ ತಕರಾರಿಲ್ಲದಿದ್ದರೂ
ಸ್ಪರ್ಧೆಗಿಂತ ಆಟದ ಬಗ್ಗೆಯೇ ಹೆಚ್ಚು ಆಸಕ್ತಿ.
ಈ ವಿಷಯದಲ್ಲಿ ಇವರು ಮಕ್ಕಳಂತೆ
ಪೂರ್ತಿಯಾಗಿ ತಾವೋದಲ್ಲಿ ಮಗ್ನರು.

Leave a Reply