ಜಗತ್ತಿನಲ್ಲಿ ಅತ್ಯಮೂಲ್ಯವಾದ ವಸ್ತು ಯಾವುದು?

ವಿದ್ಯಾರ್ಥಿಯೊಬ್ಬನಿಗೆ ಜಗತ್ತಿನಲ್ಲಿ ಅತ್ಯಮೂಲ್ಯವಾದ ವಸ್ತು ಯಾವುದಿರಬಹುದು ಎಂಬ ಜಿಜ್ಞಾಸೆ ಹುಟ್ಟಿಕೊಂಡಿತು. ಝೆನ್‌ ಗುರು ಸೋಝನ್‌ ಬಳಿ ಸಾರಿ ಕೇಳಿದ: “ಈ ಜಗತ್ತಿನಲ್ಲಿ ಅತ್ಯಮೂಲ್ಯವಾದ ವಸ್ತು ಯಾವುದು?”
“ಸತ್ತ ಬೆಕ್ಕಿನ ತಲೆ” ಎಂದು ಉತ್ತರಿಸಿದ ಸೋಝನ್.
“ಸತ್ತ ಬೆಕ್ಕಿನ ತಲೆ ಅದು ಹೇಗೆ ಅತ್ಯಮೂಲ್ಯವಾದ ವಸ್ತುವಾಗುತ್ತದೆ?”
“ಸತ್ತ ಬೆಕ್ಕಿನ ತಲೆಯ ಬೆಲೆ ಎಷ್ಟೆಂದು ಯಾರಾದರೂ ಹೇಳಲು ಸಾಧ್ಯವಿದೆಯೇ?” ಮರುಪ್ರಶ್ನೆ ಹಾಕಿ ಮಾತು ಮುಗಿಸಿದ ಸೋಝನ್.

 

Leave a Reply