ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ಯಾಕೆ ಜಗತ್ತನ್ನು ತಿದ್ದುವ ಉಮೇದು?
ಇದು ಸಾಧ್ಯವಾಗದ ಮಾತು.
ಜಗತ್ತು ಪರಿಶುದ್ಧ
ತಿದ್ದುವುದು ಸಾಧ್ಯವೇ ಇಲ್ಲ
ಪ್ರಯತ್ನಿಸಿದರೆ ಹಾನಿ, ಶತಃಸಿದ್ಧ.
ಇದು ವಸ್ತುವಲ್ಲ
ವಸ್ತು ಎಂದುಕೊಂಡರೆ
ಕಳೆದುಕೊಳ್ಳುವಿರಿ ಸಂಶಯ ಬೇಡ.
ಒಮ್ಮೆ ಮುಂದೆ, ಒಮ್ಮೆ ಹಿಂದೆ
ಒಮ್ಮೆ ಸ್ಥಾವರ, ಒಮ್ಮೆ ಜಂಗಮ
ಒಮ್ಮೆ ಹುರುಪು, ಒಮ್ಮೆ ಸುಸ್ತು
ಒಮ್ಮೆ ಸಮಾಧಾನ, ಒಮ್ಮೆ ಆತಂಕ.
ಸಂತ ಇರುವುದನ್ನು ಇದ್ದ ಹಾಗೆ ನೋಡುತ್ತಾನೆ
ನಿಯಂತ್ರಣದ ಹುಕಿ ಇಲ್ಲ.
ಎಲ್ಲವೂ ಅರಳಬೇಕು
ಅರಳಿ ಮೂಲಕ್ಕೆ ಮರಳಬೇಕು.