ತಾವೋ ತಿಳಿವು #38 ~ ತಾವೋ ಸುತ್ತ ದೇಶ ಕಟ್ಚಿದರೆ…

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

zen

ಒಂದು ದೇಶ
ಅಪರಿಮಿತ ಶಕ್ತಿಗಳನ್ನು ಒಳಗೊಳ್ಳತೊಡಗಿದಂತೆ
ಸಮುದ್ರದಂತೆ ವಿನೀತವಾಗುತ್ತದೆ.
ಆಗ ಎಲ್ಲ ನದಿಗಳು, ಝರಿಗಳು, ಧಾರೆಗಳು
ಸಮುದ್ರದತ್ತ ಧಾವಿಸುತ್ತವೆ.
ವಿನೀತವಾಗುವುದೆಂದರೆ
ಅಂಜಿಕೆಯಿಲ್ಲದೆ ಬೆನ್ನ ಹಿಂದೆ ಹಾರಿಕೊಳ್ಳುವುದು
ತಾವೋ ಜೋಳಿಗೆಯಲ್ಲಿ.

ಮಹಾನ್ ದೇಶ, ಮಹಾ ಮನುಷ್ಯನಂತೆ.
ತಪ್ಪು ಮಾಡಿದಾಗಲೆಲ್ಲ
ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ.
ಅರಿವಾದಾಗ, ಒಪ್ಪಿಕೊಳ್ಳುತ್ತಾನೆ.
ಒಪ್ಪಿಕೊಂಡಮೇಲೆ, ತಿದ್ದಿಕೊಳ್ಳುತ್ತಾನೆ.
ತಿದ್ದಿಕೊಂಡಮೇಲೆ, ತನ್ನೆಡೆಗೆ ಬೊಟ್ಟು ಮಾಡಿದವರನ್ನು
ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾನೆ.
ಅವನಿಗೆ, ವೈರಿಯೂ ತಾನೇ ಹುಟ್ಟಿಸಿದ ನೆರಳು.

ತಾವೋ ಸುತ್ತ ದೇಶ ಕಟ್ಚಿದರೆ
ಅದು ತನ್ನ ಜನರನ್ನು ತಾಯಿಯಂತೆ ಸಲಹುತ್ತದೆ.
ಮತ್ತು ಉಳಿದವರ ವ್ಯವಹಾರದಲ್ಲಿ ತಲೆಹಾಕದೆ
ಜಗದ ಬೆಳಕಾಗುತ್ತದೆ.

Leave a Reply