ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ಕಡಿಮೆ ಮಾತು, ಸಹಜ ಸ್ವಭಾವ
ಇಡೀ ದಿನ ಬೀಸದ ಗಾಳಿಯಂತೆ
ಇಡೀ ದಿನ ಸುರಿಯದ ಮಳೆಯಂತೆ.
ಮೋಡ ಸರಿದ ಮೇಲೆ, ಬಿಸಿಲು ಬೀಳಲೇ ಬೇಕು.
ಗಾಳಿ, ಮಳೆ, ಮೋಡ, ಬಿಸಿಲು ಯಾವುದೂ ಶಾಶ್ವತವಲ್ಲ
ಅಂದ ಮೇಲೆ ಮನುಷ್ಯ ಯಾವ ಲೆಕ್ಕ?
ತಾವೋಗೆ ತೆರೆದುಕೊಂಡಾಗ, ತಾವೋ ಅಪ್ಪಿಕೊಳ್ಳುವುದು.
ಹೆಸರಿನ ಬೆನ್ನು ಹತ್ತಿದರೆ, ಹೆಸರೇ ಬೆನ್ನ ಏರುವುದು.
ದಾರಿ ಕಳೆದುಕೊಂಡವರು, ಬದುಕಿಗೂ ಎರವಾಗುವರು.
ನಂಬದವರನ್ನು ನಂಬುವುದು ಅಸಾಧ್ಯ.