ನಮಗೆ ಮಾಡಬೇಕಾದ ಕೆಲಸವನ್ನು ಮುಂದೂಡುವುದರಲ್ಲಿ ಹೆಚ್ಚಿನ ಆಸಕ್ತಿ. ಇದು ನಮ್ಮ ಪಲಾಯನವಾದವಷ್ಟೆ….
ನಾವು ಬಹುತೇಕರು ಮಾಡುವುದು ಇದನ್ನೇ. ನಮ್ಮ ಬದುಕಿನಲ್ಲಿ ಪವಾಡ ಘಟಿಸಲಿದೆ ಎಂದು ಕಾಯುತ್ತಾ ಕೂರುತ್ತೇವೆ. ಆ ಪವಾಡ ನಾವು ಕಾಯುತ್ತ ಕುಳಿತ ಘಳಿಗೆಯಲ್ಲೇ ಘಟಿಸಬಹುದು. ಆದರೆ ನಾವು ಕಾಯುವುದರಲ್ಲಿ ಎಷ್ಟು ಮಗ್ನರಾಗಿರುತ್ತೇವೆ ಎಂದರೆ, ನಮ್ಮ ಕಣ್ಣೆದುರೇ ಘಟಿಸುತ್ತಿರುವ ಪವಾಡವನ್ನು ಗುರುತಿಸಲಾಗದೆ ಹೋಗುತ್ತೇವೆ. ಅದನ್ನು ಸ್ವೀಕರಿಸಲಾಗದೆ ಹೋಗುತ್ತೇವೆ. ಹೀಗೆ ನಮ್ಮದೇ ಮೂರ್ಖತನದಿಂದ ಕೈಗೆ ಬಂದಿರುವ ಅವಕಾಶವನ್ನೂ ಕಳೆದುಕೊಳ್ಳುತ್ತೇವೆ.
ನಮ್ಮ ಬದುಕಿನ ಪ್ರತಿಯೊಂದು ಕ್ಷಣವೇ ಪವಾಡವೇ ಆಗಿರುತ್ತದೆ. ನಾವು ಅದನ್ನು ನಮ್ಮದಾಗಿಸಿಕೊಳ್ಳಲು ಸೋಲುತ್ತೇವೆ. ನಮಗೆ ಸಮಯವನ್ನು ಪೋಲು ಮಾಡುವುದರಲ್ಲೇ ಹೆಚ್ಚಿನ ಆಸಕ್ತಿ. ನಮಗೆ ಮಾಡಬೇಕಾದ ಕೆಲಸವನ್ನು ಮುಂದೂಡುವುದರಲ್ಲಿ ಹೆಚ್ಚಿನ ಆಸಕ್ತಿ. ಇದು ನಮ್ಮ ಪಲಾಯನವಾದವಷ್ಟೆ. ನಮಗೆ ಪ್ರಯತ್ನ ಹಾಕುವ ಉತ್ಸಾಹ ಇರುವುದಿಲ್ಲ. ನಮಗೆ ಶ್ರಮ ಹಾಕಲು ಸೋಮಾರಿತನ. ಹಾಗೆಂದೇ ನಾವು ಪವಾಡಗಳಿಗೆ ಕಾಯುವುದು. ನಾವು ಶ್ರಮ ಹಾಕಿದ್ದೇ ಆದರೆ, ನಾವು ಪ್ರಯತ್ನಿಸಿದ್ದೇ ಆದರೆ, ಈ ಕ್ಷಣವನ್ನು, ಪ್ರತಿ ಕ್ಷಣವನ್ನೂ ಪವಾಡವಾಗಿ ಮಾಡಿಕೊಳ್ಳಬಹುದು.
ಶ್ರಮದಿಂದ, ಪ್ರಯತ್ನದಿಂದ ಸಾಧಿಸಲಾಗದ ಸಂಗತಿಯಾದರೂ ಯಾವುದಿದೆ ಹೇಳಿ!?