ತಾವೋ ತಿಳಿವು #45 ~ ಧೀರರಿಗೆ ಆಯುಧಗಳು ಬೇಕಿಲ್ಲ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

zen

ಯುಧಗಳು ಹಿಂಸೆಯ ಹತ್ಯಾರಗಳು
ಸಭ್ಯರು ಇವುಗಳಿಂದ ದೂರ.
ಆಯುಧಗಳು ಅಂಜುಬುರುಕರ ಕೈ ಕಾಲುಗಳು
ಧೀರರಿಗೆ, ಇವು ಬೇಕಿಲ್ಲ.

ಅವಶ್ಯವಿದ್ದಾಗ ಮಾತ್ರ
ಸಂತ, ಶಸ್ತ್ರ ಹಿರಿಯುತ್ತಾನೆ ಮತ್ತು
ಒರೆಗೆ ಸೇರಿಸುವ ತನಕ, ಮೈಯೆಲ್ಲ ಕಣ್ಣಾಗಿರುತ್ತಾನೆ.
ಶಾಂತಿಗೆ ಕಂಟಕ ಎದುರಾದಾಗ
ಯಾರು ತಾನೆ ಸುಮ್ಮನಿರಲು ಸಾಧ್ಯ?
ವೈರಿಗಳೇನು ಸೈತಾನರೆ?
ಅವರ ಸ್ವಂತಕ್ಕೆ ಘಾಸಿ ಮಾಡುವಲ್ಲಿ
ಸಂತನಿಗೆ ಆಸಕ್ತಿ ಇಲ್ಲ,
ಕೊಂದು ಗೆಲ್ಲುವ ಸಂಭ್ರಮದಲ್ಲಿ
ಅವನಿಗೆ ಪಾಲು ಬೇಕಿಲ್ಲ.

ಸಂತ, ಅತೀ ಗಂಭೀರನಾಗಿ
ಅಪಾರ ಸಂಕಟ, ಮಮತೆಯೊಂದಿಗೆ
ಯುದ್ಧರಂಗಕ್ಕೆ ಕಾಲಿಡುತ್ತಾನೆ
ಮಗನ ಅಂತ್ಯಕ್ರಿಯೆಗಾಗಿ, ಸ್ಮಶಾನಕ್ಕೆ ಕಾಲಿಟ್ಟ
ಹಿರಿಯಜ್ಜನಂತೆ.

Leave a Reply