ತಾವೋ ತಿಳಿವು #47 ~ ಈ ಜನ ಶ್ರೀಮಂತರಿಗಿಂತ ಮೇಲು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ನ ಹಸಿದಿದ್ದಾರೆ;
ಶ್ರೀಮಂತರು ತೆರಿಗೆ ನುಂಗಿದ್ದಾರೆ,
ಜನ ಅದಕ್ಕೇ ಹಸಿದಿದ್ದಾರೆ.

ಜನ ತಿರುಗಿ ಬೀಳುತ್ತಾರೆ;
ಶ್ರೀಮಂತರು ಜನರನ್ನ ತುಳಿದಿದ್ದಾರೆ,
ಜನ ಅದಕ್ಕೇ ತಿರುಗಿ ಬೀಳುತ್ತಾರೆ.

ಜನರಿಗೆ ಬದುಕಿನ ಬೆಲೆ ಗೊತ್ತಿಲ್ಲ;
ಶ್ರೀಮಂತರು ಬದುಕನ್ನ ತುಟ್ಟಿ ಮಾಡಿದ್ದಾರೆ,
ಅದಕ್ಕೇ ಜನರಿಗೆ ಬದುಕಿನ ಬೆಲೆ ಗೊತ್ತಿಲ್ಲ.

ಕೇವಲ ಉಸಿರಾಡುವುದಕ್ಕೆ ಜೀವಿಸಲೊಲ್ಲದವರು
ಶ್ರೀಮಂತರಿಗಿಂತ ಎಷ್ಟೋ ಮೇಲು.

Leave a Reply