ಎರಡು ಝೆನ್ ಸಂಭಾಷಣೆಗಳು

~ 1 ~

ಶಿಷ್ಯ, ಝೆನ್ ಮಾಸ್ಟರ್ ಗೆ ಪ್ರಶ್ನೆ ಹಾಕಿದ,
“ಮಾಸ್ಟರ್ ಸಾಕ್ಷಾತ್ಕಾರ ಪಡೆಯಲು ಎಷ್ಟು ಸಮಯ ಬೇಕು?”

“ಏಳು ವರ್ಷ” ಮಾಸ್ಟರ್ ಉತ್ತರಿಸಿದ.

“ಕಷ್ಟ ಪಟ್ಟು ಸಾಧನೆ ಮಾಡಿದರೆ ?” ಶಿಷ್ಯ ಮತ್ತೆ ಪ್ರಶ್ನೆ ಕೇಳಿದ.

“ಹದಿನಾಲ್ಕು ವರ್ಷ” ಮಾಸ್ಟರ್ ಉತ್ತರಿಸಿದ.

~ 2 ~

ಪಿಕ್ನಕ್ ಇಂದ ಮರಳಿದವರ ಸಂಭಾಷಣೆ:
“ಕತ್ತೆನ ಪಿಕ್ನಿಕ್ ಗೆ ಕರ್ಕೊಂಡು ಹೋಗಿದ್ದು ಎಷ್ಟು ಒಳ್ಳೆಯದಾಯ್ತು ನೋಡು”

“ಯಾಕೆ?”

“ಪಿಕ್ನಿಕ್ ಲ್ಲಿ ಆ ಹುಡುಗನಿಗೆ ಗಾಯ ಆದಾಗ, ಕತ್ತೆ ಮೇಲೆ ಕೂರಿಸ್ಕೊಂಡು ವಾಪಸ್ ಬಂದ್ವಿ. ಕತ್ತೆ ಇಲ್ದಿದ್ರೆ ಕಷ್ಟ ಆಗಿರೋದು.”

“ಹುಡುಗನಿಗೆ ಗಾಯ ಆಯ್ತಾ? ಹೇಗೆ?”

“ಕತ್ತೆ ಒದೀತು”

(ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ)

Leave a Reply