ತಾವೋ ತಿಳಿವು #50 ~ ಸಂತನಿಗೆ ಸಮಸ್ಯೆಯೇ ಅಲ್ಲ!

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಕೆಲಸದಲ್ಲಿ ದುಡಿಮೆ ಬೇಡ,
ಹೆದೆಯೇರಿಸಿದರೂ ಸ್ನಾಯುಗಳು ಮೈ ಮುರಿಯದಿರಲಿ,
ಕಣ್ಣೀರಿನಲ್ಲಿ ಸಮುದ್ರ ಕಾಣಿಸಲಿ,
ಕೆಲವನ್ನು ಹಲವೆಂದು ಬಗೆ,
ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ
ದೊಡ್ಡ ಬೆಟ್ಟವನ್ನು ಹತ್ತು.

ಮಹತ್ವಕ್ಕೆ ಕೈಚಾಚದಿರುವುದರಿಂದಲೇ
ಸಂತ ಮಹಾತ್ಮನಾಗಿದ್ದಾನೆ;

ಹುಲಿ ಏರಿ ಬಂದಾಗ
ಅವ ಓಡಿ ಹೋಗುವುದಿಲ್ಲ
ಅದನ್ನು ಹಾರಿ ತಬ್ಬಿಕೊಳ್ಳುತ್ತಾನೆ;

ಪರಿಹಾರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಅಂತೆಯೇ ಅವನಿಗೆ
ಸಮಸ್ಯೆ, ಸಮಸ್ಯೆಯೇ ಅಲ್ಲ.

Leave a Reply