ನಿಮ್ಮ ದಾರಿಯನ್ನು ನೀವೇ ರೂಪಿಸಿಕೊಳ್ಳಿ : ವೇದ ಬೋಧೆ

ಪ್ರತಿಯೊಂದು ಜೀವಿಯ ಬದುಕು ಒಂದು ಪ್ರಯಾಣವೇ ಆಗಿರುತ್ತದೆ. ಜನನ ಮರಣ ಚಕ್ರದ ನಿರಂತರ ಪ್ರಯಾಣದಲ್ಲಿ ನಮ್ಮ ದಾರಿಯನ್ನು ನಾವೇ ರೂಪಿಸಿಕೊಳ್ಳಬೇಕಾಗುತ್ತದೆ ~ ಸಾ.ಹಿರಣ್ಮಯೀ

veda

 

ಹುತೇಕವಾಗಿ ನಾವು ಒಂದು ತಪ್ಪು ಮಾಡುತ್ತೇವೆ. ಬದುಕು ನಮ್ಮದೇ ಆಗಿದ್ದರೂ ಅದರ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಬಿಡುತ್ತೇವೆ, ವಾಸ್ತವವಾಗಿ ನಮ್ಮ ನಮ್ಮ ಬದುಕಿನ ಪ್ರಯಾಣವನ್ನು ನಾವೇ ಮಾಡಬೇಕಾಗಿರುತ್ತದೆ. ಏಕೆಂದರೆ ಜನನಮರಣದ ನಿರಂತರ ಚಕ್ರದಲ್ಲಿ ನಾವು ಸಿಲುಕಿಕೊಂಡಿರುತ್ತೇವೆ. ನಮ್ಮ ಚಕ್ರದ ಪ್ರಯಾಣದ ಸುತ್ತಿನಿಂದ ತಪ್ಪಿಸಿಕೊಂಡರೆ, ಅದೇ ಮುಕ್ತಿ. ಹೀಗೆ ಮುಕ್ತಿ ಪಡೆಯಲು ಚಕ್ರದ ಸುತ್ತಿನಿಂದ ಬಿಡುಗಡೆ ಬೇಕು. ಆ ಬಿಡುಗಡೆಯನ್ನು ಪಡೆಯುವುದು ಹೇಗೆ? ಅದಕ್ಕಾಗಿ ನಾವು ಚಕ್ರದ ಸುತ್ತಿನಿಂದ ತಪ್ಪಿಸಿಕೊಳ್ಳಲು ದಾರಿಯನ್ನು ಹುಡುಕಿಕೊಳ್ಳಬೇಕಾಗುತ್ತದೆ, ಹೊಸತಾಗಿ ರೂಪಿಸಿಕೊಳ್ಳಬೇಕಾಗುತ್ತದೆ.

ಈ ದಾರಿಯನ್ನು ರೂಪಿಸಿಕೊಳ್ಳುವುದು ಹೇಗೆ? ಲೌಕಿಕದಲ್ಲೇ ಆಗಲಿ, ಅಲೌಕಿಕದಲ್ಲೇ ಆಗಲಿ, ನಮಗೆ ನಾವೇ ಜವಾಬ್ದಾರರಾಗಿರುತ್ತೇವೆ. ನಮ್ಮ ಗುರಿಯನ್ನೂ ಅದನ್ನು ತಲುಪುವ ದಾರಿಯನ್ನೂ ಆಯ್ಕೆ ಮಾಡಿಕೊಳ್ಳಬೇಕಾದವರು ನಾವೇ ಆಗಿರುತ್ತೇವೆ. ಗುರು ಹಿರಿಯರ ಬೋಧನೆಗಳು, ಶಾಸ್ತ್ರಗ್ರಂಥಗಳು ನಮಗೆ ಇತರರು ನಡೆದ ಹಾದಿಗಳ ಪರಿಚಯವನ್ನು ಮಾಡಿಸುತ್ತವೆ. ಮತ್ತು ಅವುಗಳ ಪರಿಣಾಮಗಳನ್ನು ತಿಳಿಸುತ್ತವೆ. ಅವರೆಲ್ಲರೂ ನಾವು ಕಂಡುಕೊಂಡ ದಾರಿಯು ಸರಿಯಾಗಿದೆಯೋ ಇಲ್ಲವೋ ಎಂದು ಒರೆ ಹಚ್ಚಲು ಸಹಕರಿಸುತ್ತಾರೆ. ಈ ಕಾರಣಗಳಿಗಾಗಿ ನಾವು ಅವರ ಅವಲಂಬನೆ ಮಾಡಬಹುದೇ ಹೊರತು, ನಮ್ಮ ದಾರಿಯನ್ನು ಅವರು ರೂಪಿಸಿಕೊಡಲಿ ಎಂದು ನಿರೀಕ್ಷೆ ಮಾಡುವುದು ಸರಿಯಲ್ಲ. 

ಅಥರ್ವ ವೇದದ ಈ ಮೇಲಿನ ಹೇಳಿಕೆ ಸೂಚಿಸುತ್ತಿರುವುದು ಅದನ್ನೇ. “ನಮ್ಮ ದಾರಿಯನ್ನು ಮತ್ಯಾರೋ ನಿರ್ದೇಶಿಸಬೇಕಿಲ್ಲ. ನಮ್ಮ ಮನಸ್ಸನ್ನು ಜಾಗೃತಗೊಳಿಸಿಕೊಂಡು, ನಮ್ಮ ಅನುಭವಗಳ ಆಧಾರದ ಮೇಲೆ ನಮ್ಮ ದಾರಿಯನ್ನು ನಾವೇ ರೂಪಿಸಿಕೊಳ್ಳಬೇಕು” ಎಂದು.

 

 

Leave a Reply