ತಾವೋ ತಿಳಿವು #54 ~ ಅಧಿಕಾರವೇ ಉದ್ದೇಶವಾದಾಗ…

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಹಿಷ್ಣುತೆಯ ದೇಶದಲ್ಲಿ
ಜನ, ಸಂಯಮಿಗಳು, ಪ್ರಾಮಾಣಿಕರು.
ದಬ್ಬಾಳಿಕೆಯ ದೇಶದಲ್ಲಿ
ನಿರುತ್ಸಾಹಿಗಳು, ಕಪಟಿಗಳು.

ಅಧಿಕಾರವೇ ಉದ್ದೇಶವಾದಾಗ
ಘೋಷಣೆಗಳು ಹುಟ್ಟಿಕೊಳ್ಳುತ್ತವೆ
ಪ್ರಶ್ನೆಗಳ ಬಾಯಿ ಮುಚ್ಚಿಸಲಾಗುತ್ತದೆ.

ಜನರನ್ನು ಖುಷಿಪಡಿಸಲು ಮುಂದಾಗುವುದು
ಸಂಕಟಗಳ ಮನೆಗೆ ತಳಪಾಯ ಹಾಕಿದಂತೆ.

ಜನರನ್ನು ಸದಾಚಾರಿಗಳಾಗಿಸಲು ಪ್ರಯತ್ನಿಸುವುದು
ವ್ಯಸನಗಳ ಮಹಲಿಗೆ ಅಡಿಪಾಯ ಹಾಕಿದಂತೆ.

ಅಂತೆಯೇ ಸಂತ
ಯಾವ ಹತೋಟಿಗೂ ಮುಂದಾಗುವುದಿಲ್ಲ.

ಅವನ ನಿರ್ಧಾರಗಳು ಹರಿತವಾದರೂ ಇರಿಯುವುದಿಲ್ಲ
ಮಾತು, ನಿರ್ದಾಕ್ಷಿಣ್ಯವಾದರೂ ಚುಚ್ಚುವುದಿಲ್ಲ.

ಆತ ಮಿಂಚಿನಂತೆ ಪ್ರಖರ
ಸಂಜೆಯಂತೆ ಸಮಾಧಾನಿ.

Leave a Reply