ಗರಗಸ ಹರಿತ ಮಾಡಲು ಸಮಯವಿಲ್ಲ! : ಝೆನ್ ಕಥೆ

ಬ್ಬಳು ಹೆಣ್ಣು ಮಗಳು ಕಾಡಿನ ದಾರಿಯ ಮೂಲಕ ಹಾಯ್ದು ಮನೆಗೆ ಹೋಗುತ್ತಿದ್ದಳು. ದಾರಿಯಲ್ಲಿ ಅವಳಿಗೆ ಭಾರಿ ಮರವೊಂದನ್ನು ಗರಗಸದಿಂದ ಕತ್ತರಿಸುತ್ತಿದ್ದ ಒಬ್ಬ ಯುವಕ ಕಾಣಿಸಿದ. ಅವನ ಮೈಯಿಂದ ಬೆವರು ಹರಿಯುತ್ತಿತ್ತು, ಅವ ತುಂಬ ಬಳಲಿದವನಂತೆ ಕಾಣಿಸುತ್ತಿದ್ದ.

“ಹುಡುಗಾ, ನೀನು ತುಂಬ ಅವಸರದಲ್ಲಿರುವಂತೆ, ತುಂಬ ಕಷ್ಟದಲ್ಲಿರುವಂತೆ ಕಾಣುತ್ತದೆ. ಬಹುಶಃ ನಿನ್ನ ಗರಗಸ ಮೊಂಡಾಗಿರಬಹುದು, ಯಾಕೆ ನೀನು ಮೊದಲು ಗರಗಸ ಹರಿತ ಮಾಡಿಕೊಳ್ಳಬಾರದು?” ಹೆಣ್ಣು ಮಗಳು ಯುವಕನನ್ನು ಮಾತಾಡಿಸಿದಳು.

ಅವಳತ್ತ ತಿರುಗಿಯೂ ನೋಡದೆ ಆ ಯುವಕ ಉತ್ತರಿಸಿದ. “ಮೊದಲು ನಾನು ಈ ಮರ ಕತ್ತರಿಸಬೇಕು, ಆಮೇಲೆ ಇನ್ನೂ ಎರಡು ಮರ ಕತ್ತರಿಸುವುದಿದೆ. ಗರಗಸ ಹರಿತ ಮಾಡುತ್ತ ಕುಳಿತುಕೊಳ್ಳುವಷ್ಟು ಸಮಯ ನನ್ನ ಬಳಿ ಇಲ್ಲ.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply