ಮಾಸ್ಟರ್ ಟೆಕಿಸೂಯಿ ಸಾವಿನ ಹಾಸಿಗೆಯಲ್ಲಿದ್ದ. ಅವನ ಪ್ರೀತಿಯ ಶಿಷ್ಯ ಮತ್ತು ಉತ್ತರಾಧಿಕಾರಿ ಗಾಸಾನ್ ಅವನ ಪಕ್ಕ ಕುಳಿತು ಆರೈಕೆ ಮಾಡುತ್ತಿದ್ದ.
ಇತ್ತೀಚಿಗೆ ಬೆಂಕಿ ಅನಾಹುತದಲ್ಲಿ ನಾಶವಾಗಿದ್ದ ದೇವಸ್ಥಾನದ ಜೀರ್ಣೋದ್ಧಾರದ ಕೆಲಸದಲ್ಲಿ ಗಾಸಾನ್ ತನ್ನನ್ನು ತಾನು ತೊಡಗಿಸಿಕೊಂಡಿದ್ದ.
ಟೆಕಿಸೂಯಿ : ದೇವಸ್ಥಾನದ ಕೆಲಸ ಪೂರ್ಣವಾದ ಮೇಲೆ ಏನು ಮಾಡುತ್ತೀಯ?
ಗಾಸಾನ್ : ನಿಮಗೆ ಗುಣ ಆದ ಬಳಿಕ ನೀವು ಅಲ್ಲಿ ಒಂದು ಪ್ರವಚನ ಕೊಡಬೇಕು ಮಾಸ್ಟರ್.
ಟೆಕಿಸೂಯಿ : ಅಕಸ್ಮಾತ್ ಗುಣ ಆಗದೇ ಹೋದರೆ?
ಗಾಸಾನ್ : ಬೇರೆಯವರನ್ನು ಹುಡುಕುತ್ತೇವೆ ಮಾಸ್ಟರ್.
ಟೆಕಿಸೂಯಿ : ಬೇರೆಯವರು ಸಿಗದೇ ಹೋದರೆ?
ಗಾಸಾನ್ : ಮುಚ್ಕೊಂಡು ಮಲಕ್ಕೋ ಗುರುವೇ .
Don’t ask such foolish questions, just go to sleep. ಅಷ್ಟೇ…
ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ