ಯಂತ್ರದಂತೆ ಕೆಲಸ ಮಾಡೋನ ಹೃದಯವೂ ಯಂತ್ರದಂತಾಗುತ್ತೆ… : ಒಂದು ಚೀನೀ ಕಥೆ

china
ಇಂಟರ್ನೆಟ್ ಚಿತ್ರ

ಹಾನ್ ನದಿಯ ಉತ್ತರ ಪ್ರಾಂತ್ಯದಲ್ಲಿ ತ್ಸು-ಗುಂಗ್ ಪ್ರಯಾಣಿಸುತ್ತಿದ್ದಾಗ, ಒಬ್ಬ ಮುದುಕ ತರಕಾರಿ ತೋಟದಲ್ಲಿ ಕೆಲಸ ಮಾಡುತ್ತಿದ್ದುದು ಗಮನಿಸಿದ. ತರಕಾರಿ ಹೊಲಕ್ಕೆ ಕಾಲುವೆ ಮಾಡಿ . ಮುದುಕ ಬಾವಿಗೆ ಇಳಿದು ಬಿಂದಿಗೆಯಲ್ಲಿ ತುಂಬಿ ನೀರಿನ ಕಾಲುವೆಗೆ ಚೆಲ್ಲುತ್ತಿದ್ದ. . ಅವನ ಶ್ರಮ ಅದ್ಭುತ ಆದರೆ ಅದರ ಫಲಿತ ತೀರಾ ಕಡಿಮೆ ಎನ್ನಿಸಿತು ತ್ಸು-ಗುಂಗ್ ಗೆ.

ತ್ಸು –ಗುಂಗ್ ಹೇಳಿದ, “ ಅಪ್ಪಾ. ಇಂಥಾ ನೂರು ಸಾಲುಗಳಿಗೆ ನೀರುಣಿಸುವ ಉಪಾಯವಿದೆ; ಅದೂ ಇಷ್ಟು ಶ್ರಮವಿಲ್ಲದೇ? ಅದು ಏನೆಂದು ಕೇಳುವಿಯಾ?”
ಮುದುಕ ತಲೆ ಎತ್ತಿ , “ ಏನದು?” ಎಂದು ಕೇಳಿದ.
ತ್ಸು –ಗುಂಗ್ ಹೇಳಿದ, “ ಒಂದು ಮರದ ಏತ ತೆಗೋ. ಒಂದು ತುದಿಗೆ ಭಾರದ ಕಲ್ಲು ಕಟ್ಟು, ಈ ವಿಧಾನದಲ್ಲಿ ಬೇಗ ನೀರೆತ್ತಬಹುದು. ಇದಕ್ಕೆ ಏತ ಎನ್ನುತ್ತಾರೆ”

ಮುದುಕನ ಮುಖ ಕೆಂಪೇರಿತು. ಆತ ಹೇಳಿದ, “ನನ್ನ ಮೇಷ್ಟ್ರು ಹೇಳೋದಿತ್ತು., ಯಾರು ಯಂತ್ರ ಉಪಯೋಗಿಸುತ್ತಾರೋ ಅವರು ಎಲ್ಲಾ ಕೆಲಸವನ್ನೂ ಯಂತ್ರದಂತೆ ಮಾಡುತ್ತಾರೆ. ಯಂತ್ರದಂತೆ ಕೆಲಸ ಮಾಡೋನ ಹೃದಯವೂ ಯಂತ್ರದಂತಾಗುತ್ತೆ. ಎದೆ ಯಂತ್ರದಂತಾದಾಗ ಮನುಷ್ಯ ತನ್ನ ಸರಳತೆ ಕಳೆದುಕೊಳ್ಳುತ್ತಾನೆ. ಸರಳತೆ ಕಳೆದುಕೊಂಡವನ ಆತ್ಮಕ್ಕೆ ತನ್ನ ಗುರಿ ಏನೆಂಬ ಬಗ್ಗೆ ಗೊಂದಲ ಹುಟ್ಟುತ್ತೆ. ಆತ್ಮದ ಗುರಿಯ ಗೊಂದಲ ಪ್ರಾಮಾಣಿಕ ಮನಸ್ಸಿಗೆ ಒಗ್ಗದು. ನನಗೆ ಈ ಯಂತ್ರಗಳೆಲ್ಲಾ ಗೊತ್ತಿಲ್ಲವೆಂದಲ್ಲ; ನನಗೆ ಅದನ್ನು ಬಳಸಲು ನಾಚಿಕೆಯಾಗುತ್ತೆ.”

(ಮಾರ್ಶಲ್ ಮೆಕ್ ಲೂಹಾನ್ ತಮ್ಮ Medium is Message ಪುಸ್ತಕದಲ್ಲಿ ಉಲ್ಲೇಖಿಸಿದ ಚೀನಾದ ಕಥೆ | ಅನುವಾದ : ಕೆಪಿ ಸುರೇಶ)

Leave a Reply