ತಾವೋ ತಿಳಿವು #57 ~ ತಾವೋ ತಕ್ಕಡಿಯ ಮೇಲೆ ಸದಾ ಒಂದು ಕಣ್ಣಿಡಿ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ತಾವೋ ಅತ್ಯಂತ ಸರಳ ದಾರಿ
ಆದರೂ ಜನ, ಅಡ್ಡಹಾದಿ ಹಿಡಿಯುತ್ತಾರೆ.
ಕೇಂದ್ರ ಬಿಟ್ಟು ಕದಲದಿರಿ
ತಾವೋ ತಕ್ಕಡಿಯ ಮೇಲೆ
ಸದಾ ಒಂದು ಕಣ್ಣಿಡಿ

ಶ್ರೀಮಂತರ ಅರಮನೆಗಳು
ದೀಪಗಳಿಂದ ಕಂಗೊಳಿಸುವುದು,
ರೈತರ ಹೊಲಗಳಿಗೆ ಬೆಂಕಿ ಬೀಳುವುದು,
ಔಷಧಿಯ ಬದಲಿಗೆ ಸರ್ಕಾರ
ಆಯುಧಗಳನ್ನು ಕೊಳ್ಳುವುದು,
ಉಳ್ಳವರು ಮೆರೆಯುವುದು,
ಬಡವರು ಸಾಯುವುದು,

ಇದೆಲ್ಲ ಹಗಲು ದರೋಡೆ 
ಅರಾಜಕತೆ
ತಾವೋ ಒಪ್ಪುವ ಮಾತಲ್ಲ.

Leave a Reply