ತಾವೋ ತಿಳಿವು #58 ~ ಇದು ದ್ವಂದ್ವ ಅಲ್ಲ, ಸತ್ಯ….

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಲ್ಲಕ್ಕಿಂತ ಮೃದುವಾಗಿದೆ ಮತ್ತು
ಎಲ್ಲರೊಡನೆ ಒಗ್ಗಿಕೊಳ್ಳುತ್ತದೆ
ಅಂದ ಮಾತ್ರಕ್ಕೆ
ನೀರನ್ನ ದುರ್ಬಲ ಎಂದುಕೊಳ್ಳಬೇಡಿ.

ನೀರು ಮನಸ್ಸು ಮಾಡಿದರೆ
ಏನನ್ನಾದರೂ ಮಣಿಸಬಲ್ಲದು.
ಈ ಸತ್ಯ ಪ್ರಚಾರದಲ್ಲೇನೋ ಇದೆ
ಆದರೆ
ಯಾರೂ ಗಂಭೀರವಾಗಿ ಪರಿಗಣಿಸಿಲ್ಲ.

 

ಸಂತರ ನಂಬಿಕೆ ಏನೆಂದರೆ
ರಾಜನಾದವನು
ಕರುಣೆಯನ್ನ ಬಿಟ್ಟುಬಿಡಬೇಕು,
ಕೆಟ್ಟವನಾಗಬೇಕು.

ಇದು ದ್ವಂದ್ವ ಅಲ್ಲ, ಸತ್ಯ.

Leave a Reply