ಬೃಹದಾರಣ್ಯಕ ಉಪನಿಷತ್ತು : ಸನಾತನ ಸಾಹಿತ್ಯ ~ ಮೂಲಪಾಠಗಳು #6

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ್ಯರ ಸುಪ್ರಸಿದ್ಧ ಸಂವಾದಗಳಿವೆ. ಪೂರ್ಣಮದಃ ಶಾಂತಿ ಮಂತ್ರ ಹಾಗೂ ಮತ್ತೊಂದು ಸುಪ್ರಸಿದ್ಧ ‘ಅಸತೋಮಾ ಸದ್ಗಮಯ’ ಶ್ಲೋಕವೂ ಇದೆ. ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/06/18/sanatana5/

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಮಧುಕಾಂಡ, ಯಾಜ್ಞವಲ್ಕೀಯ ಕಾಂಡ ಮತ್ತು ಖಿಲಕಾಂಡ ಎಂಬ ಮೂರು ಕಾಂಡಗಳು, ಆರು ಅಧ್ಯಾಯಗಳು ಹಾಗೂ 57 ಬ್ರಾಹ್ಮಣಗಳು ಇವೆ ಇವೆ.  ಈ ಉಪನಿಷತ್ತು ಶುಕ್ಲ ಯಜುರ್ವೇದದ ಕಾಣ್ವ ಶಾಖೆಗೆ ಸೇರಿದುದಾಗಿದೆ.

ಬೃಹದಾರಣ್ಯಕ ಉಪನಿಷತ್ತಿನ ಎರಡು, ಮೂರು ಹಾಗೂ ನಾಲ್ಕನೇ ಅಧ್ಯಾಯಗಳಲ್ಲಿ ಯಾಜ್ಞವಲ್ಕ್ಯ – ಮೈತ್ರೇಯಿಯರ ನಡುವೆ ನಡೆದ ಸುಪ್ರಸಿದ್ಧ ಸುಂದರ ಸಂವಾದ; ಜನಕ ರಾಜನ ಸಭೆಯಲ್ಲಿ ಯಾಜ್ಞವಲ್ಕ್ಯ ಮತ್ತು ಗಾರ್ಗಿ ವಾಚಕ್ನವಿಯರ ನಡುವೆ ನಡೆದ ಪ್ರಶ್ನೋತ್ತರ ಸಂವಾದ; ಹಾಗೂ ಜನಕನಿಗೆ ಯಾಜ್ಞವಲ್ಕ್ಯ ಮಾಡಿದ ಆತ್ಮತತ್ತ್ವ ವಿವರಣೆಗಳಿವೆ. ಅಲ್ಲದೆ; ದೃಪ್ತಬಾಲಾಕಿ, ಗಾರ್ಗ್ಯ ಮತ್ತು ಅಜಾತಶತ್ರು ಮೊದಲಾದವರು ಆತ್ಮವಸ್ತುವನ್ನು ಕುರಿತು ನಡೆಸಿದ ಸಂವಾದವೂ ಇದೇ ಉಪನಿಷತ್ತಿನಲ್ಲಿದೆ. ಬೃಹದಾರಣ್ಯಕದ 6ನೆಯ ಅಧ್ಯಾಯದಲ್ಲಿ ಶ್ವೇತಕೇತು ಎಂಬ ಬ್ರಾಹ್ಮಣ ಬ್ರಹ್ಮಚಾರಿಗೆ ಕ್ಷತ್ರಿಯ ರಾಜನಾದ ಜೈವಲಿಯು ನೀಡುವ ಪಂಚಾಗ್ನಿ ವಿದ್ಯೆಯ ಉಪದೇಶಗಳಿವೆ.

 ಸುಪ್ರಸಿದ್ಧವಾದ ‘ಪೂರ್ಣಮದಃ ಪೂರ್ಣಮಿದಮ್’ ಶಾಂತಿ ಹಾಗೂ “ಅಸತ್ತಿನಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ನಡೆಸಿರಿ” ಎಂದು ಪ್ರಾರ್ಥಿಸುವ ಸುಪ್ರಸಿದ್ಧ ಶ್ಲೋಕ ಇರುವುದೂ ಇದೇ ಉಪನಿಷತ್ತಿನಲ್ಲೇ.

Leave a Reply