ಚಹಾದ ಕಪ್ ಯಾಕೆ ನಾಜೂಕಾಗಿರುತ್ತದೆ? : ಝೆನ್ ಪ್ರಶ್ನೆ

samurai

ಮ್ಮೆ ವಿದ್ಯಾರ್ಥಿಯೊಬ್ಬ ಮಾಸ್ಟರ್ ರೋಶಿಯವರನ್ನು ಪ್ರಶ್ನೆ ಮಾಡಿದ.
“ಮಾಸ್ಟರ್, ಯಾಕೆ ಜಪಾನಿಗಳು ಚಹಾದ ಕಪ್ ಗಳನ್ನ ಅಷ್ಚು ತೆಳುವಾಗಿ, ಅಷ್ಟು ನಾಜೂಕಾಗಿ ತಯಾರಿಸುತ್ತಾರೆ? ಅವು ಒಡೆದು ಹೋಗುವ ಭಯ ಇರುವುದಿಲ್ಲವೆ ಅವರಿಗೆ?”

ಮಾಸ್ಟರ್ ರೋಶಿ ಉತ್ತರಿಸಿದರು “ಅದು ಹಾಗಲ್ಲ, ಅವನ್ನು ಬಳಸುವವರು ಕೂಡ ಜಾಗರೂಕರಾಗಿರಬೇಕು, ಹಗುರಾಗಿರಬೇಕು ಅಂತ, ಇದೂ ಕೂಡ ತರಬೇತಿಯ ಒಂದು ವಿಧಾನ”

ಒಂದು ಜಪಾನಿ ಸೆನ್ಯರೂ ನೆನಪಾಯಿತು:
ಪುಟ್ಟ ಮಗುವನ್ನು ಎತ್ತಿಕೊಂಡ
ಸುಮೋ ಪೈಲ್ವಾನ
ಕುಗ್ಗಿ ಅಂಗೈಯಾದ

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply