ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ
ಮನುಷ್ಯ ಹುಟ್ಟಾ ಮೃದು
ಸತ್ತಾಗ ಮಾತ್ರ, ಬಿರುಸು, ಗಡಸು.
ಗಿಡ ಮರ, ಹೂ ಬಳ್ಳಿಗಳೂ ಹಾಗೇ; ಕೋಮಲ, ನಮ್ರ
ಬಾಡಿದಾಗ, ಬರಡಾದಾಗ ಮಾತ್ರ ಒರಟು, ಪೆಡಸು.
ಅಂತೆಯೇ ಸೆಟೆದವರು, ಬಾಗದವರು
ಸಾವಿನ ಹರಿಕಾರರು.
ನಮ್ರರು, ಒಗ್ಗಿಕೊಳ್ಳುವವರು
ಬದುಕಿನ ವಾರಸುದಾರರು.
ಸೆಟೆದವು, ಒಣಗಿದವನ್ನ ಮುರಿಯುವುದು ಸುಲಭ
ಬಾಗುವವು, ಹಸಿರಾದವು ಬಹುಕಾಲ ಬಾಳುತ್ತವೆ.