ಮಾಂಡೂಕ್ಯ ಮತ್ತು ಮುಂಡಕೋಪನಿಷತ್ತುಗಳು : ಸನಾತನ ಸಾಹಿತ್ಯ ~ ಮೂಲಪಾಠಗಳು #10

ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/06/23/sanatana9/

ಥರ್ವವೇದಕ್ಕೆ ಸೇರಿದ ಮಾಂಡೂಕ್ಯೋಪನಿಷತ್ತು ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿದ್ದು, ಕೇವಲ 12 ಮಂತ್ರಗಳನ್ನು ಹೊಂದಿದೆ. ಇದರಲ್ಲಿ ಓಂ ಶಬ್ದದ ಹಿರಿಮೆ, ಅರ್ಥಶಕ್ತಿ, ಮನುಷ್ಯನ ಜಾಗ್ರತ್, ಸ್ವಪ್ನ, ಸುಷುಪ್ತಿ, ತುರೀಯ ಎಂಬ ನಾಲ್ಕು ಅವಸ್ಥೆಗಳ ವಿವರಣೆಯನ್ನು ಹೊಂದಿದೆ. ಅಷ್ಟೇ ಅಲ್ಲ, ಬ್ರಹ್ಮ,ಹಿರಣ್ಯಗರ್ಭ ಮತ್ತು ತೈಜಸ ಎಂಬ ಸೃಷ್ಟಿಶಕ್ತಿಗಳ ಕುರಿತಾದ ವಿವರಣೆಗಳೂ ಇವೆ. ಅದ್ವೈತ, ಪ್ರಪಂಚ ಎಂಬ ಪದಗಳು ಮೊದಲು ಕಾಣಿಸುವುದು ಈ ಉಪನಿಷತ್ತಿನಲ್ಲಿಯೇ.

ಮುಂಡಕೋಪನಿಷತ್ತು ಕೂಡಾ ಅಥರ್ವವೇದದ ಶೌನಕ ಶಾಖೆಗೆ ಸೇರಿದೆ. ಆರು ಅಧ್ಯಾಯಗಳಿಂದ ಕೂಡಿದ ಇದು ಕರ್ಮ, ಜ್ಞಾನಗಳ ಸ್ವರೂಪ, ನಿಜವಾದ ಜ್ಞಾನ, ಆತ್ಮಸಾಕ್ಷಾತ್ಕಾರದ ಮಾರ್ಗವೇ ಮೊದಲಾದ ವಿಷಯಗಳ ವಿವರಣೆ ನೀಡುತ್ತದೆ. ಸೃಷ್ಟಿ ಮತ್ತು ಸೃಷ್ಟಿಕರ್ತ; ಪರ ಮತ್ತು ಅಪರಾವಿದ್ಯೆ; ಬ್ರಹ್ಮ ಮತ್ತು ಬ್ರಹ್ಮಸಾಕ್ಷಾತ್ಕಾರ; ಜೀವಾತ್ಮ ಮತ್ತು ಪರಮಾತ್ಮ ಇತ್ಯಾದಿ ವಿಚಾರಗಳ ಕುರಿತು ಈ ಉಪನಿಷತ್ತಿನಲ್ಲಿ ಹೇಳಲಾಗಿದೆ. ಇಂದ್ರಿಯಜನ್ಯವಾದ ಪ್ರಪಂಚವನ್ನು ತ್ಯಜಿಸಿ ಇಂದ್ರಿಯಾತೀತವಾದ ಬ್ರಹ್ಮಾನಂದದ ಅನುಭವವನ್ನು ಪಡೆದು ಕೃತಾರ್ಥರಾಗಬೇಕೆಂದು ಈ ಉಪನಿಷತ್ತು ಕರೆಕೊಡುತ್ತದೆ. ಇದರಲ್ಲಿ ಮೂರು ಅಧ್ಯಾಯಗಳಿದ್ದು 64 ಮಂತ್ರಗಳಿವೆ.

1 Comment

Leave a Reply