ಕುದುರೆಗೆ ಎಷ್ಟು ಕಾಲು? : ಝೆನ್ ಕಥೆ

ಮಾಸ್ಟರ್ ಶಿಷ್ಯನಿಗೆ ಪ್ರಶ್ನೆ ಮಾಡಿದ
“ಕುದುರೆಯ ಬಾಲವನ್ನು ಒಂದು ಕಾಲು ಅಂದ್ಕೊಂಡ್ರೆ, ಕುದುರೆಗೆ ಒಟ್ಟು ಎಷ್ಟು ಕಾಲು ?”
ಪ್ರಶ್ನೆ ಮುಗಿಯುತ್ತಿದ್ದಂತೆಯೇ ಶಿಷ್ಯ ಉತ್ಸಾಹದಿಂದ ಉತ್ತರಿಸಿದ “ಐದು”

“ಅಂದ್ಕೊಂಡ ಮಾತ್ರಕ್ಕೆ ಬಾಲ, ಕಾಲಾಗುವುದಿಲ್ಲ. ಕುದುರೆಗೆ ಇರೋದು ನಾಲ್ಕೇ ಕಾಲು “
ಮಾಸ್ಟರ್ ನಕ್ಕುಬಿಟ್ಟ.

(ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ)

Leave a Reply