ಚೇತನವಲ್ಲದೆ ಸಾಕ್ಷಿ ಎಂಬುದಿಲ್ಲ….

photoರೂಪವು ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಆಕಾರವೂ ಕೂಡಾ. ಯಾವುದು ಸತತವಾಗಿ ಬದಲಾಗುತ್ತಲೇ ಇರುತ್ತದೆಯೋ ಅದನ್ನು ನಾವು ಸತ್ಯವೆಂದು ಕರೆಯುವುದಿಲ್ಲ. ಯಾವುದು ಬದಲಾಗುವುದೇ ಇಲ್ಲವೋ, ಯಾವಾಗಲೂ ಒಂದೇ ರೀತಿಯಾಗಿ ಇರುತ್ತದೆಯೋ ಅದನ್ನು ಸತ್ಯವೆಂದು ಕರೆಯುತ್ತೇವೆ ~ Whosoever Ji

ಲ್ಲಿ ಮತ್ತೊಂದು ಇರುವುದಿಲ್ಲವೋ ಅದು ಅದ್ವೈತ. ಎರಡಿಲ್ಲದ ಸ್ಥಿತಿಯೇ ಅದ್ವೈತ. ಈ ಎಲ್ಲ ದ್ವೈತದ ಹಿಂದೆ ಮೂಲತಃ ಅದ್ವೈತವೇ ಇದೆ. ಅದು ಈ ಎಲ್ಲದರ ಮುಖ್ಯ ಸ್ರೋತವಾಗಿದೆ. ಹೀಗಿರುವಾಗ ಅದನ್ನು ಶಬ್ದಗಳಲ್ಲಿ ವಿವರಿಸೋದು ಹೇಗೆ? ಯಾವುದಕ್ಕೆ ಒಂದು ರೂಪವಿದೆಯೋ, ಆಕಾರವಿದೆಯೋ, ಸೀಮೆ ಇದೆಯೋ ಅದನ್ನಾದರೆ ವಿವರಿಸಲು ಸಾಧ್ಯ. ಅದೊಂದೂ ಇಲ್ಲದನ್ನು ಹೇಗೆ ತಾನೆ ವಿವರಿಸೋದು?

ಯಾವುದಕ್ಕೆ ರೂಪವಿದೆಯೋ ಆಕಾರವಿದೆಯೋ ಅದು ಸತತವಾಗಿ ಬದಲಾಗುತ್ತಲೇ ಇರುತ್ತದೆ. ಅದು ಸದಾ ಕಾಲವೂ ಒಂದೇ ಬಗೆಯದಾಗಿ ಇರುವುದಿಲ್ಲ. ಇವತ್ತು ನಿಮ್ಮ ರೂಪ ಹೀಗಿದೆ. ಐದು ವರ್ಷಗಳ ನಂತರವೂ ಇದು ಹೀಗೇ ಇರುತ್ತದೆಯೇನು? ಅಥವಾ ಐದು ವರ್ಷಗಳ ಹಿಂದೆಯೂ ಹೀಗೇ ಇತ್ತೇನು!? ನೀವು ಐದು ವರ್ಷದವರಿದ್ದಾಗ ನಿಮ್ಮ ರೂಪ ಹೇಗಿತ್ತು? ನೀವು ಐದು ತಿಂಗಳ ಮಗುವಾಗಿದ್ದಾಗ ಹೇಗಿದ್ದಿರಿ? ತಾಯಿಯ ಗರ್ಭದೊಳಗೆ ಇದ್ದಾಗ ನಿಮ್ಮ ರೂಪ ಹೇಗಿತ್ತು?

ರೂಪವು ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಆಕಾರವೂ ಕೂಡಾ. ಯಾವುದು ಸತತವಾಗಿ ಬದಲಾಗುತ್ತಲೇ ಇರುತ್ತದೆಯೋ ಅದನ್ನು ನಾವು ಸತ್ಯವೆಂದು ಕರೆಯುವುದಿಲ್ಲ. ಯಾವುದು ಬದಲಾಗುವುದೇ ಇಲ್ಲವೋ, ಯಾವಾಗಲೂ ಒಂದೇ ರೀತಿಯಾಗಿ ಇರುತ್ತದೆಯೋ ಅದನ್ನು ಸತ್ಯವೆಂದು ಕರೆಯುತ್ತೇವೆ.

ಹಾಗಾದರೆ ಬದಲಾಗದೆ ಇರುವಂಥದ್ದು ಯಾವುದು? ಅದು ನಿಯತಿ. ಅದು ಸಂಭವನೆ. ನಾನು ಐದು ದಿನದವನಿದ್ದಾಗಲೂ ಸಂಭವಿಸುತ್ತಲೇ ಇದ್ದೆ. ಐದು ವರ್ಷದವನಾದಾಗಲೂ ಸಂಭವಿಸುತ್ತಿದ್ದೆ. ಐವತ್ತು, ಅರವತ್ತು, ಎಂಭತ್ತು ವರ್ಷದವನಾದರೂ ಸಂಭವಿಸುತ್ತಲೇ ಇರುವೆ. ಅದೇನೇ ಇದ್ದರೂ ಪ್ರತಿಕ್ಷಣ ನಾನು ಸಂಭವಿಸುವೆ. ಅದು ಮಾತ್ರ ಬದಲಾಗದೆ ನಿರಂತರವಾಗಿ ಇದ್ದೇ ಇರುತ್ತದೆ. ನಿಮಗಿದು ತಿಳಿದಿದೆಯೋ ಇಲ್ಲವೋ; ಅಥವಾ ಮುಂದಾದರೂ ತಿಳಿಯುತ್ತದೆಯೋ ಇಲ್ಲವೋ…. ಈವರೆಗೆ ಯಾರೆಲ್ಲ ಇದನ್ನು ತಿಳಿದುಕೊಂಡಿದ್ದಾರೋ ಅವರು ಹೇಳುತ್ತಾರೆ, “ನಾನು ಹುಟ್ಟುವ ಮೊದಲೂ ಇದ್ದೆ, ಮರಣಿಸಿದ ನಂತರವೂ ಇರುವೆ. ನನ್ನ ವಾಸ್ತವ ಅಸ್ತಿತ್ವವು ಶಾಶ್ವತವಾಗಿರುವಂಥದ್ದು. ಅದು ಅಜರಾಮರ ಅವಿನಾಶಿಯಾಗಿರುವುದು” ಎಂದು.

ನಾವು ಚೇತನದ ಬಗ್ಗೆ ಮಾತನಾಡುತ್ತಿದ್ದೆವು. ವಿಚಾರಗಳೇನೋ ಬಂದು ಹೋಗ್ತಿರುತ್ತವೆ. ಒಂದು ವಿಚಾರ ಬಂತು, ಮತ್ತೊಂದು ಹೋಯಿತು.. ಆದರೆ ಯಾವುದೋ ಒಂದು ಸದಾ ಕಾಲವೂ ಪ್ರಸ್ತುತವಿರುತ್ತದೆ. ಅದು ಚೇತನ. ಈ ಚೇತನವು ತನ್ನ ತಾದಾತ್ಮ್ಯದ ಕಾರಣದಿಂದಾಗಿ ಸುಖ ದುಃಖಗಳನ್ನು ಅನುಭವಿಸುತ್ತದೆ.

ಸುಖ ಮಾತ್ರ ಸುಳ್ಳಲ್ಲ, ದುಃಖವೂ ಸುಳ್ಳೇ. ಈ ಎಲ್ಲವೂ ಸತ್ಯಕ್ಕೆ ದೂರವಾದಂಥವು. ಎಲ್ಲವೂ ಸುಳ್ಳಿನ ಆಟ, ಕಪಟ ನಾಟಕವೇ ಸರಿ. ಹಾಗಾದರೆ, ಇವೆಲ್ಲ ಸುಳ್ಳಿನ ಆಟವೇ ಆಗಿದ್ದರೆ ನಿಜ ಯಾವುದು? ಯಾವುದಕ್ಕೆ ವಿಚಾರಗಳ ಬರವಿಕೆ – ಹೋಗುವಿಕೆಗಳ ಅರಿವಾಗುತ್ತ ಇರುತ್ತದೆಯೋ, ಯಾವುದು ಸಾಕ್ಷಿಯಾಗಿ ಎಲ್ಲವನ್ನೂ ನೋಡುತ್ತ ಇರುತ್ತದೆಯೋ, ಅದು ನಿಜವಾಗಿಯೂ ಇರುವಂಥದ್ದು. ಯಾವುದದು? ಚೇತನವಲ್ಲದೆ ಮತ್ಯಾವುದು!?

ಚೇತನವಲ್ಲದೆ ಸಾಕ್ಷಿ ಎಂಬುದಿಲ್ಲ. ಆದರೆ ಈ ಚೇತನವು ಸ್ವಯಂವಿಸ್ಮೃತಿಗೆ ಒಳಗಾಗಿರುತ್ತದೆ. ಮರೆವು ಅದರ ಸಹಜ ಸ್ವಭಾವ. ಆದರೆ, ಸತತ ಸ್ವಸ್ಮರಣೆಯ ಅಭ್ಯಾಸ ನಡೆಸುವ ಮೂಲಕ ಈ ಸ್ವಭಾವವನ್ನು ಬದಲಾಯಿಸಬಹುದು. ಸ್ವಸ್ಮರಣೆ ಅಂದರೆ, “ನಾನು ಇದ್ದೇನೆ” ಎಂಬುದನ್ನೇ ಮೇಲಿಂದ ಮೇಲೆ ನೆನೆಯುತ್ತ, ನಮಗೆ ನಾವೆ ಮನದಟ್ಟು ಮಾಡಿಕೊಳ್ಳುತ್ತ ಇರುವುದು. ಮತ್ತೆ ಮತ್ತೆ ಸ್ವಯಂ ಅಸ್ತಿತ್ವದ ಭಾವದಲ್ಲಿ ಸ್ಥಿರವಾಗಿ ನಿಲ್ಲುವುದು.

ಅದಕ್ಕೇ ನಾನು ಆಗಾಗ ಹೇಳೋದು. ಯಾರಾದರೂ ಎನ್’ಲೈಟನ್ಡ್ ಆಗಿದ್ದಾರೆ ಅಂದರೆ, ಅವರಿಗೆ ಅದು ಗೊತ್ತಿರುವುದಿಲ್ಲ. ಏಕೆಂದರೆ ಅದು – ಎನ್’ಲೈಟ್ಮೆಂಟ್ – ಸಹಜ ಸ್ವಭಾವವಾಗಿದೆ. ನಾನು ವಸ್ತುತಃ ಏನಿದ್ದೇನೋ ಅದನ್ನು ಮರೆಯಬಹುದಷ್ಟೇ ಹೊರತು ಕಳೆದುಕೊಳ್ಳಲಂತೂ ಸಾಧ್ಯವಿರುವುದಿಲ್ಲ. ಸ್ವಭಾವವನ್ನು ಮರೆಯುವಂತೆಯೇ ಅದನ್ನು ಮತ್ತೆ ನೆನಪಿಗೆ ತಂದುಕೊಳ್ಳಲೂಬಹುದು.
ಒಬ್ಬ ಸಂತನಿಗೆ ತಾನು ಸಂತನೆಂದು ತಿಳಿದಿದೆಯಾದರೆ, ಆತ ಸಂತನೇ ಆಗಿರುವುದಿಲ್ಲ.

ಎಲ್ಲ ಢೋಂಗಿ ಸಂತರೂ ಸದಾ ಕಾಲ ತಮ್ಮನ್ನು ಸಂತರೆಂದು ಬಿಂಬಿಸಿಕೊಳ್ಳುವುದರಲ್ಲಿ ಮಗ್ನರಾಗಿರುತ್ತಾರೆ. ತಮ್ಮನ್ನು ಸಂತರಂತೆ ಬಿಂಬಿಸಿಕೊಳ್ಳಲು ಏನೆಲ್ಲ ಕಸರತ್ತು ನಡೆಸುತ್ತಾರೆ. ವೇಷಭೂಷಣಗಳಲ್ಲಿ, ನಡೆ ನುಡಿಯಲ್ಲಿ, ಸಹವಾಸದಲ್ಲಿ, ಗತ್ತು ಗೈರತ್ತಿನಲ್ಲಿ ತಮ್ಮ ಸಂತತನ ಎದ್ದು ಕಾಣೂವಂತೆ ಜಾಗರೂಕವಾಗಿ ವ್ಯವಹರಿಸುತ್ತಾರೆ. ಏಕೆಂದರೆ, ವಾಸ್ತವದಲ್ಲಿ ಸಂತರಾಗಿಲ್ಲದ ಅವರು ತಮ್ಮನ್ನು ಹಾಗೆ ಬಿಂಬಿಸಿಕೊಳ್ಳುವ ಅನಿವಾರ್ಯಕ್ಕೆ ಬಿದ್ದಿರುತ್ತಾರೆ, ಅಷ್ಟೆ. 

Leave a Reply