ಮೊದಲ ಹೆಜ್ಜೆ ಪ್ರಯಾಣಕ್ಕೆ ಮುನ್ನುಡಿ : ಅರಳಿಮರ POSTER

ನೆಲಕ್ಕೂರಿದ ಹೆಜ್ಜೆಯನ್ನು ಎತ್ತಿಡದೆ ನಡಿಗೆ ಸಾಧ್ಯವಾಗುವುದೇ? ನಡಿಗೆ ಸಾಧ್ಯವಾಗದೆ ಪ್ರಯಾಣ ಸಾಧ್ಯವಾಗುವುದೇ? ಆ ಮೊದಲ ಹೆಜ್ಜೆಯೇ ಸಾವಿರಾರು ಮೈಲುಗಳ ಪ್ರಯಾಣಕ್ಕೆ ಮುನ್ನುಡಿಯಾಗಿದೆ!

6

ನೆಲದ ಮೇಲೆ ಊರಿದ ಕಾಲನ್ನು ತೆಗೆಯದೆ ನಡಿಗೆ ಸಾಧ್ಯವಿಲ್ಲ. ನಡಿಗೆ ಸಾಧ್ಯವಾಗದೆ ಹೋದರೆ ಪ್ರಯಾಣವೂ ಸಾಧ್ಯವಿಲ್ಲ. “ಒಂದು ಹೆಜ್ಜೆ ಎತ್ತಿಡುವ ಮೂಲಕ ಸಾವಿರಾರು ಮೈಲುಗಳ ಪ್ರಯಾಣ ಆರಂಭವಾಗುತ್ತದೆ” ಎಂದು ಲಾವೋತ್ಸು ಹೇಳಿದ್ದನ್ನು ಹೀಗೆ ಅರ್ಥೈಸಬಹುದು. 

ನಾವು ನೆಲಕ್ಕಂಟಿಕೊಂಡಿರುತ್ತೇವೆ. ನಮಗೆ ನೆಲೆಯೂರಿದ ಹೆಜ್ಜೆಯನ್ನು ಎತ್ತಲು ಭಯ. ಎಲ್ಲಿ ನೆಲೆ ಕಳೆದುಕೊಂಡುಬಿಡುತ್ತೇವೋ ಎಂದು ಆತಂಕ. ಆದ್ದರಿಂದಲೇ ನಾವು  ಚಲಿಸದೆ, ಪ್ರಯಾಣ ಮಾಡದೆ, ನಿಂತನೀರಾಗಿಬಿಡುತ್ತೇವೆ. ಇಲ್ಲಿ ಪ್ರಯಾಣವನ್ನು ಅಕ್ಷರಶಃ ದೇಹದ ಚಲನೆ ಎಂದು ಪರಿಗಣಿಸಬಾರದು. ಇಲ್ಲಿ ಅಂತರಂಗದ ಪ್ರಯಾಣ ಮತ್ತು ಆ ನಿಟ್ಟಿನ ಮೊದಲ ಹೆಜ್ಜೆಯನ್ನು ಮುಂದಿಡುವಿಕೆ ಎನ್ನುವ ಅರ್ಥವು ಮುಖ್ಯವಾಗಿ ಅಡಕವಾಗಿದೆ. 

Leave a Reply