ನಮಗೆ ಕೇಳಿಸಿಕೊಳ್ಳುವುದಕ್ಕಿಂತ ಪ್ರತಿಕ್ರಿಯಿಸುವುದರಲ್ಲೇ ಹೆಚ್ಚಿನ ಆಸಕ್ತಿ. ಹೀಗಾಗಿಯೇ ನಾವು ಬಹಳಷ್ಟನ್ನು ಗ್ರಹಿಸಲಾಗದೆಹೋಗುತ್ತೇವೆ.
ನಾವು ಬಹುತೇಕವಾಗಿ ಮಾಡುವುದು ಇದನ್ನೇ. ಯಾರಾದರೂ ಮಾತಾಡುವಾಗ ಅವರೇನು ಹೇಳುತ್ತಾರೆ ಎಂದು ಕೇಳಿಸಿಕೊಳ್ಳದೆ ನಾನೇನು ಹೇಳಬೇಕು ಎಂಬುದರ ಬಗೆಗೇ ಹೆಚ್ಚು ಉತ್ಸಾಹ ಹೊಂದಿರುತ್ತೇವೆ. ಹಾಗೆಯೇ ಏನನ್ನಾದರೂ ನೋಡುವಾಗ ಅದನ್ನು ಹೇಗೆ ವರ್ಣಿಸಬೇಕು ಎಂದು ಯೋಚಿಸುತ್ತಾ ಪದಗಳನ್ನು ಹೆಣೆಯುವುದರಲ್ಲೇ ಮಗ್ನರಾಗಿಬಿಡುತ್ತೇವೆ. ಗ್ರಹಿಸುವುದಕ್ಕಿಂತ ಹೆಚ್ಚಾಗಿ ಪ್ರತಿಕ್ರಿಯಿಸುವುದರಲ್ಲೇ ನಮಗೆ ಆಸಕ್ತಿ. ನಾವು ಅರೆಬರೆ ತಿಳಿವಳಿಕೆ ಹೊಂದುವಂತೆ ನಮ್ಮ ಈ ವರ್ತನೆಯಿಂದಲೇ.
ಆದ್ದರಿಂದಲೇ ಚಾಪ್ಲಿನ್ ಹೇಳುತ್ತಾನೆ, “ಏನನ್ನಾದರೂ ನೋಡುವಾಗ, ಕೇಳುವಾಗ ಮೌನವಾಗಿ ಅದನ್ನು ಅನುಭವಿಸಬೇಕು. ಅದು ಬಿಟ್ಟು ಸಿಕ್ಕಾಪಟ್ಟೆ ತಲೆ ಓಡಿಸಿದರೆ ನೋಡುವ / ಕೇಳುವ ಖುಷಿಯನ್ನೂ ಕಳೆದುಕೊಳ್ಳುತ್ತೇವೆ; ಅದರಿಂದ ಸಿಗಬಹುದಾದ ತಿಳಿವನ್ನೂ….” ಎಂದು.