ಭಗವದ್ಗೀತೆ; ಅಧ್ಯಾಯ 12 ಮತ್ತು 13 : ಸನಾತನ ಸಾಹಿತ್ಯ ~ ಮೂಲಪಾಠಗಳು #20

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ. 

krsna

ಅಧ್ಯಾಯ 12 : ಭಕ್ತಿಯೋಗ

ಭಗವಂತನು ಈ ಪ್ರಪಂಚವನ್ನು ಸೃಷ್ಟಿ ಮಾಡಿ, ಹದಿನೈದು ಬೇಲಿಗಳ ಸಂಸಾರದಲ್ಲಿ ಜೀವವನ್ನು ಇಟ್ಟ. ಈ ಹದಿನೈದು ಬೇಲಿಗಳೆಂದರೆ – ಶ್ರದ್ಧೆಯ ಬೇಲಿ, ಪಂಚಭೂತಗಳ ಬೇಲಿ (ಒಟ್ಟು 5), ಇಂದ್ರಿಯಗಳ ಬೇಲಿ, ಅಂತಃಕರಣದ ಬೇಲಿ, ಅನ್ನದ ಬೇಲಿ, ವೀರ್ಯದ ಬೇಲಿ, ತಪದ ಬೇಲಿ, ಮಂತ್ರ – ತನ್ನ ಕನಸನ್ನು ನನಸು ಮಾಡಲು ಆಡುವ ಮಾತುಗಾರಿಕೆಯ ಬೇಲಿ, ಕರ್ಮ – ಕನಸನ್ನು ಸಾಧಿಸಲು ಮಾಡುವ ಕರ್ಮದ ಬೇಲಿ, ಲೋಕಗಳು – ಸ್ಥಿರ ಚರ ಸೊತ್ತುಗಳ ಬೇಲಿ, ಹಾಗೂ ಕೀರ್ತಿಯ ಬೇಲಿ.
ಈ ಹದಿನೈದು ಬೇಲಿಯ ಒಳಗೆ ಸಿಕ್ಕಿ ಹಾಕಿಕೊಂಡಿರುವುದು ಹದಿನಾರನೆಯದಾದ “ಕ್ಷರ”.

ಜೀವನಿಗೆ ಈ ಮೇಲಿನ ಬೇಲಿ ಎನ್ನುವ ಅಂಗಿ ಹಾಕಿ ಈ ಪ್ರಪಂಚಕ್ಕೆ ಕಳಿಸಿರುವುದು ಚಿತ್ ಪ್ರಕೃತಿ – ಹದಿನೇಳನೆಯವಳಾದ ಜಗಜ್ಜನನಿ. ಕ್ಷರ – ಅಕ್ಷರಗಳಿಗಿಂತ ಅತೀತನಾದ ಭಗವಂತನೇ ಹದಿನೆಂಟನೆಯವನಾದ ಪುರುಷಃ. ಆತನೇ ಪುರುಷೋತ್ತಮ.
ಹೀಗೆ ಮೇಲಿನ ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸುತ್ತದೆ ಹನ್ನೆರಡನೆ ಅಧ್ಯಾಯ.

ಅಧ್ಯಾಯ 13 : ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗ

ಹದಿಮೂರನೇ ಅಧ್ಯಾಯವು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಕ್ಷೇತ್ರ ಮತ್ತು ಕ್ಷೇತ್ರಜ್ಞರ ಬಗ್ಗೆ ವಿವರಿಸುವ ಇದೊಂದು ಅಪೂರ್ವ ಅಧ್ಯಾಯ. ಈ ಹಿಂದಿನ ಹನ್ನೆರಡು ಅಧ್ಯಾಯಗಳಲ್ಲಿ ಏನು ಹೇಳಲಾಗಿದೆಯೋ ಅವೆಲ್ಲವನ್ನು ಸಂಗ್ರಹ ಮಾಡಿ ಈ ಅಧ್ಯಾಯದಲ್ಲಿ ಹೇಳಲಾಗಿದೆ. ಆದ್ದರಿಂದ ಈ ಅಧ್ಯಾಯವನ್ನು ಹಿಂದಿನ ಎರಡು ಷಟ್ಕಗಳಲ್ಲಿ ಕಂಡ ವಿಷಯಗಳ ಪೂರ್ಣ ವಿಶ್ಲೇಷಣೆ ಅನ್ನಬಹುದು.

ಜಡ ಪ್ರಪಂಚ; ಅದರಲ್ಲಿ ಪ್ರಕೃತಿಯಲ್ಲಿ ಬದ್ಧನಾಗಿ, ಪ್ರಕೃತಿಯಿಂದ ಪಾರಾಗಲು ಬಯಸುವ ಜೀವ. ಪಾರಾಗುವುದಕ್ಕೊಸ್ಕರ ಜ್ಞಾನದ ಅನುಸಂಧಾನ ಮತ್ತು ಸಾಧನೆ – ಈ ಎಲ್ಲಾ ವಿಷಯಗಳನ್ನು ನಾವು ಹಿಂದಿನ ಅಧ್ಯಾಯಗಳಲ್ಲಿ ವಿವರವಾಗಿ ನೋಡಿದ್ದೇವೆ. ಅದೆಲ್ಲವುದರ ಒಂದು ಸಮಷ್ಠಿ ಸಂಗ್ರಹ ಈ ಅಧ್ಯಾಯದಲ್ಲಿದೆ.

Leave a Reply