ನಾವು ಪ್ರೀತಿಸುವುದು…. : ಅರಳಿಮರ POSTER

“ನಾವು ಬದುಕನ್ನು ಪ್ರೀತಿಸುವುದು ಬದುಕಿಗೆ ಒಗ್ಗಿಕೊಂಡಿದ್ದೇವೆ ಎಂದಲ್ಲ, ಪ್ರೀತಿಗೆ ಒಗ್ಗಿಕೊಂಡಿದ್ದೇವೆ ಎಂದು” ಅನ್ನುತ್ತಾನೆ ಫ್ರೆಡ್ರಿಕ್ ನೀಷೆ. 

nishe

ನೀಷೆ ಮಾತಿನಲ್ಲಿ ಎಷ್ಟು ಸತ್ಯವಿದೆ ನೋಡಿ! ನಮಗೆ ಬದುಕಲಿಕ್ಕೇನೂ ಪ್ರೀತಿ ಬೇಕಿಲ್ಲ. ಆದರೆ ಪ್ರೀತಿಗಾಗಿ ಪ್ರೀತಿ ಬೇಕು. ಪ್ರೀತಿಯ ಅನುಭೂತಿ ನಮಗೆಂಥ ಗುಂಗು ಹಿಡಿಸಿರುತ್ತದೆ ಎಂದರೆ, ಪ್ರೀತಿಸದೆ ನಾವು ಇರಲಾರೆವು ಅನ್ನುವಷ್ಟು! 

ಪ್ರೀತಿಗಾಗಿ ನಾವು ಬದುಕುವುದಿಲ್ಲ. ಹಾಗೆ ಹೇಳುವವರು ನಿಜವನ್ನೇ ಹೇಳುತ್ತಾರ ಎಂದೇನೂ ಇಲ್ಲ. ಅದು ಅವರ ಪಾಲಿನ ಆ ಸಂದರ್ಭದ ಭಾವುಕ ಸತ್ಯವಷ್ಟೆ ಆಗಿರುತ್ತದೆ. ಆದರೆ ಪ್ರೀತಿಗಾಗಿ ನಾವು ಪ್ರೀತಿಸುತ್ತೇವೆ. ಅದನ್ನು ಬೇರೆ ಯಾವುದಕ್ಕೂ ತಳಕು ಹಾಕುವುದು ಸರಿಯಲ್ಲ. 

Leave a Reply