ವರ್ಜೀನಿಯಾ ವೂಲ್ಫ್ ಹೇಳಿದ್ದು : ಅರಳಿಮರ POSTER

“ಧಾವಂತಪಡುವ ಅಗತ್ಯವಿಲ್ಲ, ಸಿಡಿಮಿಡಿಗೊಳ್ಳಬೇಕಾಗಿಲ್ಲ; ಇನ್ಯಾರೋ ಆಗಿ ಬದುಕಬೇಕಾಗಿಯೂ ಇಲ್ಲ…. ನಾವು ನಾವಾಗಿದ್ದರೆ ಅಷ್ಟೇ ಸಾಕು” ಅನ್ನುತ್ತಾಳೆ ವರ್ಜೀನಿಯಾ ವೂಲ್ಫ್. 

woolf

ಹುತೇಕ ಎಲ್ಲ ಸಾಧಕರೂ ಹೇಳುವ ಮಾತಿದು. “ನೀವು ನೀವೇ ಆಗಿರಿ” ಎಂದು. 20ನೇ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಖ್ಯಾತ ಇಂಗ್ಲಿಶ್ ಬರಹಗಾರ್ತಿ ವರ್ಜೀನಿಯಾ ವೂಲ್ಫ ಕೂಡಾ ಅದನ್ನೇ ಹೇಳಿದ್ದಾಳೆ. 

ನಾವು ಇನ್ಯಾರನ್ನೋ ನೋಡಿ ನಾವು ಅವರಂತೆ ಆಗಲು ಬಯಸುತ್ತೇವೆ. ನಾವು ಗೋಧಿ ಕಾಳಾಗಿರುತ್ತೇವೆ ಮತ್ತು ನಮ್ಮ ತೆನೆಯಲ್ಲಿ ಜೋಳದ ತೆನೆ ಬೆಳೆಯಬೇಕೆಂದು ಬಯಸುತ್ತೇವೆ!! ಇದು ಹೇಗೆ ಸಾಧ್ಯ? ಸಾಧ್ಯವಿಲ್ಲ ಅಲ್ಲವೆ? ಈ ವೈಫಲ್ಯ ನಮ್ಮನ್ನು ಕಂಗೆಡಿಸುತ್ತದೆ. ನಾವು ಏನಾಗಿದ್ದೇವೆ ಅನ್ನುವುದನ್ನು ಸಂಪೂರ್ಣ ಮರೆತು ಮತ್ತೊಬ್ಬರಾಗುವ ತುಡಿತದಲ್ಲಿ ಸಹನೆ ಕಳೆದುಕೊಳ್ಳುತ್ತೇವೆ, ಅಶಾಂತರಾಗುತ್ತೇವೆ. ಆದ್ದರಿಂದಲೇ ವೂಲ್ಫ್, ‘ಸಿಡಿಮಿಡಿಗೊಳ್ಳುವ ಅಗತ್ಯವಿಲ್ಲ’ ಎಂದೂ ಹೇಳಿರುವುದು. 

Leave a Reply