ಇಬ್ನ್ ಅರಬಿ ಹೇಳಿದ್ದು : ಅರಳಿಮರ POSTER

“ಭಗವಂತನು ಕಲ್ಲಿನಲ್ಲಿ ನಿದ್ರಿಸುತ್ತಾನೆ, ಸಸ್ಯಗಳಲ್ಲಿ ಕನಸುತ್ತಾನೆ, ಪ್ರಾಣಿಗಳಲ್ಲಿ ಮಿಸುಕಾಡುತ್ತಾನೆ ಮತ್ತು ಮನುಷ್ಯನಲ್ಲಿ ಎಚ್ಚರಾಗುತ್ತಾನೆ” ಅನ್ನುತ್ತಾನೆ ಸೂಫಿ ಇಬ್ನ್ ಅರಬಿ. 

ibn

ಸೃಷ್ಟಿಯ ಪ್ರತಿಯೊಂದು ಜಡ – ಚಲನಶೀಲ ವಸ್ತುವಿನಲ್ಲೂ ಪರಮ ಅಸ್ತಿತ್ವದ ಚೈತನ್ಯವಿರುತ್ತದೆ. ಅದು ಯಾವ ವಸ್ತುವನ್ನು ಎಷ್ಟು ಪ್ರಮಾಣದಲ್ಲಿ ಆವರಿಸಿಕೊಂಡಿರುತ್ತದೆ ಅನ್ನುವುದರ ಮೇಲೆ ಆಯಾ ವಸ್ತುವಿನ ವಿಕಸನ ನಿರ್ಧಾರಗೊಳ್ಳುತ್ತದೆ ಅನ್ನುವುದು ಇಬ್ನ್ ಅರಬಿಯ ಹೇಳಿಕೆಯ ವಿಸ್ತೃತಾರ್ಥ. 

Leave a Reply