ಕಾಲ ಎಲ್ಲ ಗಾಯಗಳನ್ನು ಮಾಯಿಸುತ್ತದೆ….

ಗಾಯವೂ ಒಂದು ಬೆಳಕಿಂಡಿ
~ ರೂಮಿ

saki1

: ಸಾಕಿ

ಮ್ಮ ಪ್ರೀತಿ ಪಾತ್ರರು ಅದ್ಯಾವುದೋ ಘಳಿಗೆಯಲ್ಲಿ ಜಗಳವಾಡಿ, ಅತ್ಯಂತ ಆಳದ ಗಾಯ ನಮ್ಮೆದೆಯಲ್ಲಿ ಮೂಡಿಸಿ ಹೋಗಿರುತ್ತಾರೆ ಎಂದಿಟ್ಟುಕೊಳ್ಳೋಣ. ಇಂತಹ ಸಂದರ್ಭಗಳಲ್ಲಿ ನಾವು ಅತ್ಯಂತ ದುಃಖಿತರಾಗಿ ಬಿಡುತ್ತೇವೆ. ಇನ್ನು ಕೆಲವರು ಮಾನಸಿಕ ಖಿನ್ನತೆಗೂ ಒಳಗಾಗುವುದುಂಟು. ಆದರೆ, ಒಮ್ಮೆ ಆ ಗಾಯವನ್ನು; ಜಗಳವಾಡಿದ ಸಂಗತಿ ಮತ್ತು ಸಂದರ್ಭವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಅದು ಯಾಕೆ ಮತ್ತು ಹೇಗೆ ಆಯಿತು ಎಂದು ಚಿಂತಿಸಿ. ಅಲ್ಲಿ ನಮಗೆ ಸಂಬಂಧಗಳ ಹೊಸ ತಿಳಿವು ಸಿಕ್ಕೇ ಸಿಗುತ್ತದೆ.

ಕಾಲ ಎಲ್ಲ ಗಾಯಗಳನ್ನು ಮಾಯಿಸುತ್ತದೆ ಅಂತ ಹೇಳುವುದನ್ನು ಕೇಳಿದ್ದೇವೆ. ಹಾಗೆ ಕಾಲದ ಆ ಘಳಿಗೆಗೆ ಕಾಯುತ್ತಿರುವ ಅಸಂಖ್ಯಾತ ಜನರನ್ನೂ ನಾವು ಕಾಣಬಹುದು. ಒಂದರ್ಥದಲ್ಲಿ ಅವರೆಲ್ಲ ಬದುಕಿನ ಕೆಲ ಅತ್ಯಂತ ಸುಂದರ ಕ್ಷಣಗಳನ್ನೂ ಕೂಡ ಯಾವುದೋ ಹಳೆ ಗಾಯದ ನೆನಪಿನಲ್ಲಿ ಕಳೆದುಕೊಂಡು ಬಿಡುತ್ತಾರೆ. ಕೆಲವರಿಗೆ ತಮ್ಮ ಬಾಳಿನಲ್ಲಿ ಕ್ಷುಲ್ಲಕ ಕಾರಣವೊಂದಕ್ಕೆ ಕಳೆದುಕೊಳ್ಳುತ್ತಿರುವ ಸುಖ ನೆಮ್ಮದಿಗಳ ಪರಿವೆಯೇ ಇರುವುದಿಲ್ಲ. ಇನ್ನು ಕೆಲವರಿಗೆ ಅದು ದ್ವೇಷವಾಗಿ ಪ್ರತೀಕಾರದ ದಾಹಕ್ಕೆ ಎಳಸುತ್ತದೆ. ಆದರೆ, ನಮಗೆ ನೋವುಗಳು ಗಾಯಗಳೇ ಆಗಿರದಿದ್ದರೆ, ಬದುಕಿನ ಕಟು ಸತ್ಯಗಳನ್ನು ಒಳ ತೂರಿ ಬಿಡುವ ಬೆಳಕಿಂಡಿಗಳಾದರೆ ಕಾಲದ ಹಂಗಿನಲ್ಲಿ ನೋವು ಹೊತ್ತು ಸಾಗ ಹಾಕಬೇಕಾದ ಪರಿಸ್ಥಿತಿಯೂ ಉದ್ಭವಿಸುವುದಿಲ್ಲ ಮತ್ತು ಮುಂದಕ್ಕೆ ಯಾವ ಸಂಬಂಧಗಳೂ ಗಾಯಗಳ ಸೃಷ್ಟಿಸುವುದಿಲ್ಲ.

 

Leave a Reply