ಪ್ರತಿದಿನವೂ ಉಡುಗೊರೆ : ಅರಳಿಮರ POSTER

“ನಿಮ್ಮ ಹಕ್ಕಿನಿಂದ ಈ ದಿನ ನಿಮಗೆ ದೊರೆತಿಲ್ಲ. ಇದು ನಿಮಗೆ ಕೊಡಲಾದ ಉಡುಗೊರೆ”

day

ಕೆಲವೊಮ್ಮೆ ನಾವು ನಮ್ಮ ದಿನವನ್ನು ಅದೆಷ್ಟು ಉಡಾಫೆಯಾಗಿ ಕಳೆದುಬಿಡುತ್ತೇವೆ. ಈ ಇಪ್ಪತ್ನಾಲ್ಕು ಗಂಟೆಗಳು ನಮ್ಮ ಹಕ್ಕಿನವು, ನಾವು ಅದನ್ನು ಏನು ಬೇಕಾದರೂ ಮಾಡುತ್ತೇವೆ ಅನ್ನುವ ಧೋರಣೆ ನಮಗಿರುತ್ತದೆ. ಈ ಧೋರಣೆಯಿಂದ ನಮಗೆ ನಷ್ಟ ಮಾಡಿಕೊಳ್ಳುವುದು ಮಾತ್ರವಲ್ಲ, ಇತರರಿಗೂ ಹಾನಿಯಾಗುವ ಸಾಧ್ಯತೆ ಹೆಚ್ಚು. 

ವಾಸ್ತವದಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಗಳು ನಮ್ಮ ಹಕ್ಕಲ್ಲ. ಅವು ನಮಗೆ ಕೊಡಲ್ಪಟ್ಟ ಉಡುಗೊರೆ ಎಂದು ಭಾವಿಸಬೇಕು. ಅವನ್ನು ಗೌರವದಿಂದ ವಿನಯೋಗಿಸಬೇಕು. ಉಡುಗೊರೆಯನ್ನು ತಾತ್ಸಾರ ಅಥವಾ ಉಡುಗೊರೆಯಿಂದ ನೋಡಲಾಗುತ್ತದೆಯೇ? ಖಂಡಿತ ಇಲ್ಲ. ಉಡುಗೊರೆಯನ್ನು ಪ್ರೀತಿಯಿಂದ, ಜತನದಿಂದ ಕಾಣುತ್ತೇವೆ ಅಲ್ಲವೆ? ಹಾಗೆಯೇ ನಮ್ಮ ಪ್ರತಿಯೊಂದು ದಿನವನ್ನೂ ಆದರದಿಂದ ಕಾಣಬೇಕು. ಕೃತಜ್ಞತೆಯಿಂದ ಎದುರಾಗಬೇಕು. ಈ ದಿನ ನಮ್ಮ ಪಾಲಿಗೆ ಬಂದುದಕ್ಕೆ ನಾವು ನಿಯತಿಗೆ ಆಭಾರಿಯಾಗಿರಬೇಕು. 

ಆಗ ನಾವೂ ಪ್ರಯೋಜನ ಪಡೆಯಬಹುದು, ಇತರರಿಗೂ ಉಪಯೋಗಿಯಾಗಬಹುದು. 

Leave a Reply