ಆಯ್ಕೆಯಲ್ಲಿ ಎಚ್ಚರವಿರಬೇಕು : ಅರಳಿಮರ POSTER

‘ನಮ್ಮ ಇರುವಿಕೆಯಂತೆ ಜಗತ್ತು ಇರುವುದು’ ಎನ್ನಲಾಗುತ್ತದೆ. ‘ಜಗತ್ತಿನಂತೆ ನಾವು ಇರುತ್ತೇವೆ’ ಎನ್ನುವುದು ಕೂಡ ಅಷ್ಟೇ ಸತ್ಯ. ಆದರೆ ಈ ಎರಡೂ ಹೇಳಿಕೆಯಲ್ಲಿ, ಮುಖ್ಯವಾಗುವುದು ನಮ್ಮ ಆಯ್ಕೆ.

quote

ನಾವು ಸಕಾರಾತ್ಮಕ ಚಿಂತನೆ ಹೊಂದಿದ್ದರೆ, ನಾವು ಧೀರರೂ ಸಹಿಷ್ಣುಗಳೂ ಆಗಿದ್ದರೆ, ನಮ್ಮ ಸುತ್ತಲಿನ ಜಗತ್ತು ಕೂಡಾ ಹಾಗೆಯೇ ಇರುತ್ತದೆ. ನಮ್ಮ ಸುತ್ತಲಿನ ಜನರು ನಮ್ಮ ಪ್ರಭಾವಕ್ಕೆ ಬಂದು, ತಾವೂ ಬದಲಾಗಿ, ‘ನಮ್ಮಂತೆ ಇರುವಿಕೆಯಂತೆ’ ಜಗತ್ತನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.

ಅದಕ್ಕೆ ಬದಲಾಗಿ ನಾವು ದುರ್ಬಲರೂ  ಅರಿವುಗೇಡಿಗಳೂ ಆಗಿದ್ದರೆ, ಬಹಳ ಬೇಗ ಜಗತ್ತಿನ ಪ್ರಭಾವಕ್ಕೆ ಸಿಲುಕುತ್ತೇವೆ, ಅದರಂತೆ ನಾವೂ ಆಗಿಬಿಡುತ್ತೇವೆ. ನಮ್ಮ ಸುತ್ತಲಿನ ಜಗ್ತಿನಲ್ಲಿ, ಜನರು ದುಷ್ಟರೂ ಅಸಹಿಷ್ಣುಗಳೂ ಮಾನಸಿಕ ವಾಂಛೆಗಳನ್ನು ನಿಯಂತ್ರಿಸಲಾಗದ ದುರ್ಬಲರೂ ಆಗಿದ್ದು; ನಾವು ಎಲ್ಲ ಬಗೆಯಿಂದಲೂ ಧೀರರಾಗಿದ್ದರೆ, ಅವರಿಂದ ನಮ್ಮ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಅದಕ್ಕೆ ಬದಲಾಗಿ, ನಾವು ದುರ್ಬಲರಾಗಿದ್ದರೆ, ಅವರಂತೆಯೇ ನಾವೂ, ಅಂದರೆ ‘ಜಗತ್ತಿನಂತೆ ನಾವು’ ಆಗಿಬಿಡುತ್ತೇವೆ. 

ನಾವು ನಿಜಕ್ಕೂ ಪ್ರಭಾವಶಾಲಿಗಳಾಗಿದ್ದೀವಾ? ಅಥವಾ ಪ್ರಭಾವಕ್ಕೆ ಒಳಗಾಗುವ ದುರ್ಬಲರಾಗಿದ್ದೀವಾ? ಇದು ನಮಗೆ ಬಹಳ ಚೆನ್ನಾಗಿ ಗೊತ್ತಿರುತ್ತದೆ. ಒಂದರ್ಧ ಗಂಟೆ ಕುಳಿತು ನಮ್ಮನ್ನು ನಾವು ಪ್ರಾಮಾಣಿಕವಾಗಿ ನೋಡಿಕೊಂಡರೆ ಸಾಕು. ಬಹುತೇಕವಾಗಿ ನಾವು ಈ ಎರಡು ಸಾಧ್ಯತೆಗಳ ನಡುವಿನವರೇ ಆಗಿರುತ್ತೇವೆ. ಆದ್ದರಿಂದ, ನಮ್ಮ ಸುತ್ತಲಿನ ಜಗತ್ತನ್ನು; ಇಲ್ಲಿ ಜಗತ್ತು ಎಂದರೆ ಸಹವಾಸಿಗಳು – ಗೆಳೆಯರು ಇತ್ಯಾದಿ, ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. 

 

Leave a Reply