ಹಫೀಝ್ ಹೇಳಿದ್ದು : ಅರಳಿಮರ POSTER

ನಿಮಗೆ ಯಾವುದು ಸಂತಸ ನೀಡುವುದೋ, ಯಾವುದು ನಿಮ್ಮನ್ನು ಜೀವಂತಿಕೆಯಿಂದ ಇರಿಸುವುದೋ, ಸದಾ ಅದರ ಸನಿಹದಲ್ಲಿರಿ. ~ ಹಫೀಜ್

hafiz2

ನಾವು ಮಾಡುವ ಕೆಲಸ, ನಾವು ಬೆಳೆಸುವ ಸಂಬಂಧಗಳು, ನಾವು ಆಯ್ಕೆ ಮಾಡಿಕೊಳ್ಳುವ ಗೆಳೆಯ ಗೆಳರಿಯರು ನಮಗೆ ಖುಷಿ ಕೊಡುವಂತಿರಬೇಕು. ಹಾಗಿಲ್ಲವಾದರೆ, ಅವುಗಳು ಖುಷಿ ಕೊಡುತ್ತಿಲ್ಲವಾದರೆ, ನಮ್ಮ ಆಯ್ಕೆಯಲ್ಲಿ ತಪ್ಪಿದೆ ಹೊರತು, ಅವುಗಳಲ್ಲಿ ಅಲ್ಲ.

ಆದರೆ ನಾವು ಮಾಡುವುದೇನು? ಕೆಲಸವನ್ನು ದೂರುತ್ತೇವೆ. ಸಂಬಂಧಗಳನ್ನು ದೂರುತ್ತೇವೆ. ಸಂಗಾತಿಗಳನ್ನು ದೂರುತ್ತೇವೆ. ದೂರುವುದೇ ನಮಗೆ ಕೆಲಸ. ಇದರಿಂದ ಹದಗೆಡುವುದು ನಮ್ಮದೇ ಮನಸ್ಸು. 

ಇದು ಬಹಳ ಸರಳವಿದೆ. ಒಂದೋ ಸರಿಯಾದ ಆಯ್ಕೆ ಮಾಡಿಕೊಳ್ಳಬೇಕು, ಅಥವಾ ಆಯ್ಕೆಯನ್ನೇ ಪ್ರೀತಿಸತೊಡಗಬೇಕು. ಏನಾದರೂ ಸರಿಯೇ, ಗೊಣಗುತ್ತ ಯಾವ ಕೆಲಸವನ್ನೂ ಮಾಡಬಾರದು, ಯಾವ ಸಂಬಂಧವನ್ನೂ ಬೆಳೆಸಬಾರದು. 

ನಾವು ಏನು ಮಾಡಿದರೂ ಯಾರ ಜೊತೆ ಇದ್ದರೂ ನಮ್ಮ ಉದ್ದೇಶ ಸಂತದಿಂದ ಇರುವುದೇ ಆಗಿರುತ್ತದೆ. ನಮಗೆ ಸಂತಸ ನೀಡುವ ಸಂಗತಿಗಳು ನಮ್ಮಲ್ಲಿ ಲವಲವಿಕೆಯನ್ನು, ಜೀವಂತಿಕೆಯನ್ನು ನೀಡುತ್ತವೆ. 

ಆದ್ದರಿಂದ, ಅಂಥ ಸಂತಸದಾಯಕ ಸಂಗತಿಗಳ ಸನಿಹದಲ್ಲಿರಿ. ಭೌತಿಕವಾಗಿ ಸಾಧ್ಯವಾಗದೆ ಹೋದರೆ ಮಾನಸಿಕವಾಗಿಯಾದರೂ ಸರಿ… ಅವುಗಳ ಸಾಂಗತ್ಯದಲ್ಲಿರಲು ಪ್ರಯತ್ನಿಸಿ. 

Leave a Reply