ದಕ್ಷಿಣ ಜಪಾನಿನ ವಿದ್ಯಾರ್ಥಿಯೊಬ್ಬ ಉತ್ತರದ ಗುರುವಿನ ಬಳಿ ಝೆನ್ ಕಲಿಯಲು ಬಂದ.
ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಗುರು ಹೇಳಿದ ಮೊದಲ ಮಾತು, “ಬುದ್ಧ ಎಂಬುವವನು ಇರಲೇ ಇಲ್ಲ”
ಶಿಷ್ಯ ಸುಮ್ಮನೆ ಗುರುವನ್ನೆ ದಿಟ್ಟಿಸಿದ.
“ನಾನು ಅನ್ನುವವನಿಲ್ಲ” ಗುರು ಅಂದ.
ಶಿಷ್ಯ ಸುಮ್ಮನೆ ಕುಳಿತಿದ್ದ.
“ನೀನು ಕೂಡಾ ಇಲ್ಲ” ಗುರು ಶಿಷ್ಯನ ಮುಖ ನೋಡಿದ.
ಅವನು ಹಾಗೆ ಕುಳಿತೇ ಇದ್ದ.
ಅವನ ಮುಖದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.
“ನಿನ್ನ ಪ್ರವೇಶ ಪರೀಕ್ಷೆ ಮುಗಿಯಿತು. ನಾಳೆಯಿಂದ ಶಿಕ್ಷಣ ಆರಂಭೀಸೋಣ” ಅನ್ನುತ್ತಾ ಗುರು ಎದ್ದು ಹೋದ.