ಚಹಾ ಬಟ್ಟಲಿನ ಕೊನೆ ಘಳಿಗೆ : Tea time story

ಝೆನ್ ಮಾಸ್ಟರ್ ಇಕ್ಕಿಯು, ಬಾಲ್ಯದಿಂದಲೂ ಬಹಳ ಬುದ್ಧಿವಂತ.
ಅವನು ಗುರುಕುಲದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ.

ಅವನ ಗುರುವಿನ ಬಳಿ ಬಹಳ ಚೆಂದದ ಮತ್ತು ಅಪರೂಪದ ಒಂದು ಚಹಾ ಬಟ್ಟಲು ಇತ್ತು. ಅದನ್ನು ಅವರು ಜೋಪಾನವಾಗಿ ತೆಗೆದಿರಿಸಿದ್ದರು.
ಒಮ್ಮೆ ಇಕ್ಕಿಯು ಗುರುವಿನ ಕೋಣೆ ಗುಡಿಸುವಾಗ ಹೇಗೋ ಆ ಚಹಾ ಬಟ್ಟಲು ಬಿದ್ದು ಒಡೆದುಹೋಯಿತು. ಅದೇ ಸಮಯಕ್ಕೆ ಗುರುವಿನ ಹೆಜ್ಜೆ ಸಪ್ಪಳವೂ ಕೇಳಿಬಂತು.

ಇಕ್ಕಿಯು ಗಾಬರಿಯಾಗಲಿಲ್ಲ. ಕೈಯಲ್ಲಿ ಚಹಾಬಟ್ಟಲಿನ ಚೂರುಗಳನ್ನು ಹಿಡಿದುಕೊಂಡು, ಬೆನ್ನ ಹಿಂದೆ ಅಡಗಿಸಿ ನಿಂತ.

“ಮಾಸ್ಟರ್, ಜನರೇಕೆ ಸಾಯುತ್ತಾರೆ?” ಕೇಳಿದ.
“ಅದು ಸಹಜ. ಸಮಯ ಬಂದಾಗ ಎಲ್ಲವೂ ಕೊನೆಯಾಗಲೇ ಬೇಕು” ಅನ್ನುವ ಉತ್ತರ ಬಂದಿತು.

ಇಕ್ಕಿಯು ತನ್ನ ಕೈ ಮುಂದೆ ಚಾಚುತ್ತಾ, “ಈ ಚಹಾ ಬಟ್ಟಲಿಗೂ ಕೊನೆ ಘಳಿಗೆ ಬಂದಿತ್ತು” ಅಂದ.

Leave a Reply