ಇದು ಯಾವ ಧ್ಯಾನ !? : Tea time story

ಸೆಂಟ್ ಫ್ರಾನ್ಸಿಸ್ ಜಪಾನ್ ಪ್ರವಾಸಕ್ಕೆ ಬಂದಾಗ, ಝೆನ್ ಮಾಸ್ಟರ್ ನಿನ್ಶಿಸ್ತು ನ ಆಶ್ರಮ ನೋಡುವ ಆಸೆ ವ್ಯಕ್ತ ಪಡಿಸಿದ. ಮಾಸ್ಟರ್ ನಿನ್ಶಿಸ್ತು ಅತಿಥಿಯನ್ನು ಕರೆದುಕೊಂಡು ತನ್ನ ಆಶ್ರಮದ ಎಲ್ಲ ವಿಭಾಗಗಳನ್ನು ತೋರಿಸುತ್ತ ಬಂದ.

ಧ್ಯಾನದ ಭಾಗಕ್ಕೆ ಬಂದಾಗ, ಅಲ್ಲಿ ಹತ್ತಾರು ಸನ್ಯಾಸಿಗಳು ಗಂಭೀರವಾಗಿ ಧ್ಯಾನ ಮಾಡುತ್ತ ಕುಳಿತಿರುವುದನ್ನೂ, ಆ ಸನ್ಯಾಸಿಗಳ ಮುಖದಲ್ಲಿನ ತೇಜಸ್ಸನ್ನೂ ಕಂಡು ಸೆಂಟ್ ಫ್ರಾನ್ಸಿಸ್ ಗೆ ತುಂಬ ಖುಶಿಯಾಯಿತು.

“ ಏನು ಮಾಡುತ್ತಿದ್ದಾರೆ ಇವರೆಲ್ಲ? ಯಾವ ಧ್ಯಾನ ಇದು? “ ಎಂದು ಮಾಸ್ಟರ್ ನಿನ್ಶಿಸ್ತು ನ ಪ್ರಶ್ನೆ ಮಾಡಿದ.

ನಿನ್ಶಿಸ್ತು, ನಗುತ್ತ ಉತ್ತರಿಸಿದ.
“ಕೆಲವರು ಕಳೆದ ತಿಂಗಳು ಗಳಿಸಿದ ಲಾಭ ಲೆಕ್ಕ ಹಾಕುತ್ತಿದ್ದಾರೆ. ಇನ್ನೂ ಕೆಲವರು ಬರುವ ತಿಂಗಳ ಖರ್ಚಿಗೆ ಚಿಂತೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಬರಲಿರುವ ರಜೆ ಹೇಗೆ ಕಳೆಯಬೇಕೆಂದು ವಿಚಾರ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಂಥ ಮುಖ್ಯ ಕೆಲಸ ಏನೂ ಮಾಡುತ್ತಿಲ್ಲ”

(ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ)

Leave a Reply