ಬದುಕುವುದು ಎಂದರೆ ನಿಮ್ಮನ್ನು ನೀವು ಕಂಡುಕೊಳ್ಳುವುದಲ್ಲ, ನಿಮ್ಮನ್ನು ನೀವು ರೂಪಿಸಿಕೊಳ್ಳುವುದು ~ ಜಾರ್ಜ್ ಬರ್ನಾಡ್ ಷಾ
ಬದುಕುವುದು ಎಂದರೇನು? ಕೆಲವರು ‘ನಿಮ್ಮನ್ನು ನೀವು ಕಂಡುಕೊಳ್ಳುವುದೇ ಬದುಕು’ ಅನ್ನುತ್ತಾರೆ. ಬರ್ನಾಡ್ ಷಾ, ‘ನಿಮ್ಮನ್ನು ನೀವು ರೂಪಿಸಿಕೊಳ್ಳುವುದು ಬದುಕು’ ಅನ್ನುತ್ತಾರೆ.
ಎರಡಕ್ಕೂ ಅಂಥಾ ವ್ಯತ್ಯಾಸವೇನಿಲ್ಲ. ನಮ್ಮನ್ನು ನಾವು ಕಂಡುಕೊಳ್ಳುವುದು ಅಂದರೆ;ನಮ್ಮ ಅಂತಃಸತ್ವವನ್ನು ಕಂಡುಕೊಳ್ಳುವು, ನಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳುವುದು. ಕಂಡುಕೊಂಡ ಮೇಲೆ ಸುಮ್ಮನಿರುತ್ತೇವೆಯೇ? ಆ ಸತ್ವದ ತಳಹದಿಯ ಮೇಲೆ, ನಮ್ಮ ಸಾಮರ್ಥ್ಯ ಬಳಸಿ, ನಮ್ಮ ನಿಜವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಆಗ ಅದು ಬದುಕಾಗುತ್ತದೆ.
ಆದ್ದರಿಂದ, ಎರಡನ್ನೂ ಒಗ್ಗೂಡಿಸಿ, “ನಾವು ಏನು ಮಾಡಬಲ್ಲೆವು, ನಮ್ಮ ಆಸಕ್ತಿ ಏನು, ನಮ್ಮ ಉದ್ದೇಶ ಏನು ಎಂದು ‘ಕಂಡುಕೊಂಡು’, ಅದರಂತೆ ನಮ್ಮ ವ್ಯಕ್ತಿತ್ವವನ್ನೂ ಜೀವನದ ದಾರಿಯನ್ನೂ ‘ರೂಪಿಸಿಕೊಳ್ಳುವ’ ಪ್ರಕ್ರಿಯೆಯೇ ಬದುಕು” ಅನ್ನಬಹುದು.