2019 : ಅರಳಿಮರ exclusive calendar

ಕಾಲ, ಬೊಗಸೆಗೆ ದಕ್ಕದ ಒಮ್ಮುಖ ಹರಿವು. ಅದು ಅಳತೆಗೆ ನಿಲುಕದ್ದು. ಆದರೂ ನಮ್ಮ ಅನುಕೂಲಕ್ಕಾಗಿ ಸೂರ್ಯನ ಉದಯಾಸ್ತಮಾನಗಳ ಆಧಾರದಲ್ಲಿ ದಿನದಿಂದ ಹಿಡಿದು ವರ್ಷದ ವರೆಗೆ ಕಾಲಮಾನವನ್ನು ನಿಕ್ಕಿ ಮಾಡಿಕೊಂಡಿದ್ದೇವೆ. 

ಈಗ ಮತ್ತೆ ಅಂಥದೇ ಕಾಲಮಾನದ ಮತ್ತೊಂದು ಗುಡ್ಡೆ ನಮ್ಮೆದುರಿದೆ. ಕಳೆದ ವರ್ಷದ ಸಮಯದ ಗುಡ್ಡೆ ಕರಗಿದೆ. ಅದರಲ್ಲಿ ಎಷ್ಟು ಬದುಕಿದೆವು ಅನ್ನುವುದು ನಮ್ಮನಮ್ಮ ವಿವೇಚನೆ ತೀರ್ಮಾನಿಸಬೇಕಾದ ವಿಷಯ. ಮುಂದಿನ ಒಂದಿಡೀ ವರ್ಷ ನಮ್ಮೆದುರಿದೆ. ನಮ್ಮ ಆಯಸ್ಸನ್ನು ಒಂದು ವರ್ಷ ಹೆಚ್ಚಿಸುವ, ಬದುಕುವ ಅವಧಿಯನ್ನು ಒಂದು ವರ್ಷ ತಗ್ಗಿಸುವ ಈ ‘ವರ್ಷ’ವೆಂಬ ಸೋಜಿಗವನ್ನು ಹೇಗೆ ವಿನಿಯೋಗಿಸಬೇಕು? ಅದನ್ನು ಕೂಡಾ ನಮ್ಮ ವಿವೇಕವೇ ನಿರ್ಧರಿಸಬೇಕು. 

ನಮ್ಮ ಮುಂಬರುವ ವರ್ಷವನ್ನು ಹೇಗೆ ವಿನಿಯೋಗಿಸಬೇಕೆಂದು ಪ್ಲಾನ್ ಮಾಡುವುದಕ್ಕೆ ಸಹಾಯ ಮಾಡಲೆಂದೇ  ‘ಅರಳಿಮರ’ ಒಂದು ವಿಶಿಷ್ಟ ಕ್ಯಾಲೆಂಡರ್ ಸಿದ್ಧಪಡಿಸಿದೆ. ಗಮನಿಸಿ…. ನಿಮ್ಮ ಪರಿಚಿತರೊಂದಿಗೂ ಹಂಚಿಕೊಳ್ಳಿ. 

aralimara cal

ಈ ಕ್ಯಾಲೆಂಡರಿಗೆ ಪೂರಕ ಚರ್ಚೆ ಮುಂದಿನ ದಿನಗಳಲ್ಲಿ ನಡೆಸೋಣ. ಕ್ಯಾಲೆಂಡರ್ ಹೇಗನಿಸಿತು, ಹೇಳಲು ಮರೆಯಬೇಡಿ. 

ಮುಂಚಿತವಾಗಿ, ಹೊಸ ವರ್ಷದ ಶುಭಾಶಯ. 

One thought on “2019 : ಅರಳಿಮರ exclusive calendar

Leave a Reply