ಹಫೀಜ್’ನ ಗುರು ಹೇಳಿದ್ದು… : ಒಂದು ಸೂಫಿ ಪದ್ಯ

ಒಮ್ಮೆ ನಾನು
ನನ್ನ ಗುರುವನ್ನು ಕೇಳಿದೆ.
ನಮ್ಮಿಬ್ಬರ ನಡುವೆ ಇರುವ
ಅಂಥ ವ್ಯತ್ಯಾಸವಾದರೂ ಏನು?

ಹಫೀಜ್
ಇಲ್ಲಿ ಕೇಳು,

ಕಾಡೆಮ್ಮೆಗಳ ಗುಂಪೊಂದು
ನಮ್ಮ ಮನೆಯೊಳಗೆ ನುಗ್ಗಿ
ನಮ್ಮ ಖಾಲಿ ಭಿಕ್ಷಾ ಪಾತ್ರೆಗಳನ್ನ
ಕೆಳಗೆ ಬೀಳಿಸಿದರೆ
ನಿನ್ನ ಪಾತ್ರೆಯೊಳಗಿಂದ
ಒಂದು ಹನಿಯೂ ಕೆಳಗೆ ಬೀಳುವುದಿಲ್ಲ.
ಆದರೆ ಭಗವಂತ
ನನ್ನ ತಟ್ಟೆಯೊಳಗೇನೋ ಒಂದು
ಅದೃಶ್ಯ ಅಪರೂಪವನ್ನು ಇರಿಸಿದ್ದಾನೆ.
ಅದೇನಾದರೂ ಕೆಳಗೆ ಬಿದ್ದರೆ
ಈ ಇಡೀ ಜಗತ್ತೇ
ಕೊಚ್ಚಿಕೊಂಡು ಹೋಗುತ್ತದೆ.

ಮೂಲ : ಹಫೀಜ್ | ಕನ್ನಡಕ್ಕೆ : ಚಿದಂಬರ ನರೇಂದ್ರ

Leave a Reply