ನೂರಾಒಂದು ಕೌರವರ ಹೆಸರು ಗೊತ್ತೆ? ಇಲ್ಲಿದೆ ನೋಡಿ…

ನಾವೆಲ್ಲ ಕೇಳಿರುವ ಕಥೆಯಂತೆ ಗಾಂಧಾರಿಯ ಮಾತ್ಸರ್ಯದ ಫಲವಾಗಿ ಪಿಂಡ ನೂರಾಒಂದು ಚೂರಾಗಿ ಬಿದ್ದು ಕುಂಭದಲ್ಲಿ ಬೆಳೆದು ಜನಿಸಿದ ಮಕ್ಕಳೇ ಕೌರವರು. ಇದು ಅಸಾಧ್ಯ ಎಂದುಕೊಂಡರೆ, ಧೃತರಾಷ್ಟ್ರ ಒಬ್ಬ ಅರಸ. ಅವನ ರಾಣಿಯರಲ್ಲಿ ಜನಿಸಿರಬಹುದಾದ ಒಟ್ಟು ಮಕ್ಕಳು ನೂರಾಒಂದು ಎಂದೂ ಭಾವಿಸಬಹುದು. ಪುರಾಣಗಳ ಅಧಿಕೃತತೆ ಅಡಗಿರುವುದು ನಮ್ಮ ನಂಬಿಕೆಯಲ್ಲಿ. 

ಈ ನೂರಾಒಂದು ಮಕ್ಕಳಲ್ಲದೇ, ಧೃತರಾಷ್ಟ್ರನಿಗೆ ದಾಸಿಯಲ್ಲಿ ಜನಿಸಿದ ಯುಯುತ್ಸು ಎಂಬ ಮಗನೂ ಇದ್ದಾನೆ. ಈತ ದುರ್ಯೋಧನ ಜನಿಸಿದ ಘಳಿಗೆಯಲ್ಲೇ ಜನಿಸಿದನೆಂದು ಹೇಳಲಾಗುತ್ತದೆ. ಯುಯುತ್ಸು, ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರ ವಹಿಸಿದನೆಂದು ಪ್ರತೀತಿ.  ಈತನೂ ಕೌರವನೇ ಆದರೂ ಅಧಿಕೃತವಾಗಿ ಕುರುವಂಶದ ಗುರುತು ಪಡೆದಿಲ್ಲ. 

ಉಳಿದಂತೆ, ದುಃಶಲೆಯೆಂಬ ಮಗಳೂ ಸೇರಿದಂತೆ ದೃತರಾಷ್ಟ್ರನ ನೂರಾ ಒಂದು ಮಕ್ಕಳು ಕೌರವರೆಂದು ಹೆಸರಾಗಿದ್ದಾರೆ. ಈ ನೂರಾಒಂದು ಕೌರವರ ಹೆಸರುಗಳನ್ನು ಸಂಗ್ರಹಿಸಿ ಕಳಿಸಿದ್ದಾರೆ ಅರಳಿಮರ ಓದುಗರಲ್ಲೊಬ್ಬರಾದ ಸತ್ಯಮೂರ್ತಿ ನಾರಾಯಣ.

ಈಗ ದುರ್ಯೋಧನಾದಿ 101 ಮಕ್ಕಳ ಹೆಸರೇನು ನೋಡೋಣ : 

  1. ದುರ್ಯೋಧನ
  2. ದುಶ್ಯಾಸನ
  3. ದುಃಸಳ
  4. ದುಃಶಳ
  5. ಜಲಸಂಘ
  6. ಸಮ
  7. ಸಹ
  8. ವಿಂದ
  9. ಅನುವಿಂದ
  10. ದುರ್ಘರ್ಷ
  11. ಸುಭಾಹು
  12. ದುಷ್ಟ್ರದರ್ಶಣ
  13. ದುರ್ಮುಖ
  14. ದುರ್ಮಷಣ
  15. ದುಷ್ಕರ್ಣ
  16. ಕರ್ಣ
  17. ವಿವಿಂಶಿತ
  18. ವಿಕರ್ಣ
  19. ಶಲಿ
  20. ಸತ್ಯ
  21. ಸುಲೋಚನ
  22. ಚಿತ್ರ
  23. ಉಪಚಿತ್ರ
  24. ಚಿತ್ರಾಷ
  25. ಶರಾಸನ
  26. ತಾರಾಮಿತ್ರ
  27. ದುರ್ಮದ
  28. ದುರ್ವಿಗಾಹ
  29. ವಿಕಚಾನನ
  30. ವಿವಿತ್ಸು
  31. ಊರ್ಣನಾಭ
  32. ದುರ್ದಶನ
  33. ನಂದ
  34. ಉಪನಂದ
  35. ಚಿತ್ರಬಾಣ
  36. ಚಿತ್ರದರ್ಮ
  37. ಸವರ್ಮ
  38. ದುರ್ವಿಯೋಚನ
  39. ಸುನಾಭ
  40. ಅಯೋಬಾಹು
  41. ಮಹಾಬಾಹು
  42. ಚಿತ್ರಾಂಗ
  43. ಚಿತ್ರಕುಂಡಲ
  44. ಭೀಮವೇಗ
  45. ಭೀಮಬಳ
  46. ಉಳಾರ
  47. ಬಲವರ್ಧನ
  48. ನಿಷಂಗಿ
  49. ಉಗ್ರಾಯುಧ
  50. ಸುಷೇಣ
  51. ಕುಡಧಾರ
  52. ಮಹೋಧಾರ
  53. ದೃಢವರ್ಮ
  54. ದೃಢಪಾಣಿ
  55. ಸೋಮಕೀರ್ತಿ
  56. ಚಿತ್ರಾಯುಧ
  57. ಅನುದರ
  58. ವೃಂದಾರಕ
  59. ದೃಢಸಂಘ
  60. ಜರಾಸಂಘ
  61. ಸದಃಸುವಾರ
  62. ಸತ್ಯಸಂಘ
  63. ಉಗ್ರಾಶಯ
  64. ಉಗ್ರಸೇನ
  65. ಸೇನಾನಿ
  66. ದುಷ್ಟರಾಜಯ
  67. ಅಪರಾಜಿತ
  68. ಕುಂಡಶಾಯಿ
  69. ವಿಶಾಲಾಕ್ಷ
  70. ದುರಾಧುರ
  71. ದೃಢಹಸ್ತ
  72. ಮಹನ್
  73. ಸವರ್ಚನ
  74. ವಾಚವೇಗ
  75. ಉಹ್ವಾಶಿ
  76. ಆದಿತ್ಯಕೇಶ
  77. ಅಗ್ರವಾಯಿ
  78. ಕವಟಿ
  79. ನಾಗರತ್ನ
  80. ಕಥನ
  81. ಕುಂಡಿ
  82. ಕುಂಡಿಧರ
  83. ವೀರಬಾಹು
  84. ಭೀಮರಥ
  85. ಅಲೋಲುಪ
  86. ಅಭಯ ನಾಮ
  87. ರೌದ್ರವರ್ಮ
  88. ದೃಢರಥ
  89. ಅನಾದೃಶ್ಯ
  90. ಕುಂಢಭೇದಿ
  91. ವಿರಾವಿ
  92. ಪ್ರಮಾಥ
  93. ಪ್ರಮಾಥಿ
  94. ದೀರ್ಘರೋಮ
  95. ವೀರ್ಯವಾನ
  96. ದೀರ್ಘಬಾಹು
  97. ಮ್ಯಾಡೋರ
  98. ಕನಕಧ್ವಜ
  99. ಕುಂಡಾಶಿ
  100. ವಿರಣ
  101. ದುಃಶಲಾ

Leave a Reply