ಪಲಾಯನವಾದಿ ವ್ಯಕ್ತಿಗಳು ಮಾತ್ರ ವ್ಯಸನಿಗರಾಗುತ್ತಾರೆ. ತಮ್ಮನ್ನು ತಾವು ಖುಷಿಯಾಗಿಟ್ಟುಕೊಳ್ಳುವ ಹೊಣೆಯಿಂದ ಪಲಾಯನ, ದುಃಖ ನಿರ್ವಹಿಸಲಾಗದ ಪಲಾಯನ, ಸಂತಸ ನಿಭಾಯಿಸಲಾಗದ ಪಲಾಯನ, ನಷ್ಟ ಭರಿಸಲಾಗದ ಪಲಾಯನ, ಲಾಭದ ಜವಾಬ್ದಾರಿ ಹೊರಲಾಗದ ಪಲಾಯನ… ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ತನ್ನ ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಮಾದಕ ದ್ರವ್ಯದ ಮೊರೆ ಹೋಗುವ ಜನರು ವ್ಯಸನಕ್ಕೆ ಅಂಟಿಕೊಂಡುಬಿಡುತ್ತಾರೆ.
ಇಂಥವರು ಹಿಂದೆಯೂ ಇದ್ದರು, ಈಗಲಂತೂ ಇದ್ದೇ ಇರುತ್ತಾರೆ; ದುರದೃಷ್ಟವಶಾತ್, ಮುಂದೆಯೂ ಇರುತ್ತಾರೆ. ಹೀಗೆ ವ್ಯಸನಕ್ಕೆ ಅಂಟಿಕೊಂಡ ಬೇಜವಾಬ್ದಾರಿ ಪಲಾಯನವಾದಿಗಳಲ್ಲಿ ನೀವೂ ಒಬ್ಬರಾಗಿದ್ದೀರಾ ನೋಡಿಕೊಳ್ಳಿ. ಅಥವಾ ನಿಮ್ಮ ಸುತ್ತಮುತ್ತ ಅಂಥವರಿದ್ದರೆ, ಅವರಿಗೆ ಸರ್ವಜ್ಞ ಕಿವಿಹಿಂಡಿ ಹೇಳಿದ ಈ 8 ವಚನಗಳನ್ನು ಓದಿ, ಓದಿಸಿ…