ಆರು ಗುಣ ಬಿಡುವೊ ಅವ ಗುಲಾಮ
ಆಗೋ ಗುರುವಿನ ಗುಲಾಮ ||ಪ||
ಮೋಹಕ್ಕ ತಿಳಿದಿಲ್ಲ ಮರಮ
ಮದವೆಂಬುದು ಕಟ್ಟ ಹರಾಮ
ವಂಚೆರ ಆಡತಾವ ವರಮ
ಆಗೋ ಗುರುವಿನ ಗುಲಾಮ ||1||
ನೋಡಿದರ ನೀಚೆಂಬ ಧರಮ
ಉಚ್ಚುವೆನು ಬೆನ್ನಿನ ಚರಮ
ನಿಂದ ನೀನೆ ಕಾಯ್ದಕೊ ಭರಮ
ಆಗೋ ಗುರುವಿನ ಗುಲಾಮ ||2||
ಅಲ್ಲಂದರ ಯಾತರ ಜಲಮ
ಗುರುವಿಲ್ದೆ ಹತ್ತಲಿಲ್ಲ ಪಲಮ
ಹುಸನಾ ಹೇಳ್ಯಾನ ಹೊಸ ಕಲಮ
ಆಗೋ ಗುರುವಿನ ಗುಲಾಮ ||3||
(ಆಕರ ಕೃಪೆ : ಜನಪ್ರಿಯ ತತ್ವಪದ ಸಾಹಿತ್ಯ ಮಾಲೆ, ಕ.ಸಂ.ಇಲಾಖೆ)