ಚತುಷ್ಟಯ : ಧಾರ್ಮಿಕ ಸಾಹಿತ್ಯದಲ್ಲಿ ಬರುವ ನಾಲ್ಕರ ಪದಸಮುಚ್ಚಯ

ಪ್ರಾಚೀನ ಸಾಹಿತ್ಯ, ಧಾರ್ಮಿಕ – ಆಧ್ಯಾತ್ಮಿಕ ಸಾಹಿತ್ಯದಲ್ಲಿ ಅಂಕೆಗಳ ಪದ ಸಮುಚ್ಚಯ ಬಳಕೆಯಲ್ಲಿದೆ. ಕೆಲವೊಮ್ಮೆ ನಾವು ಅದರ ವಿವರಕ್ಕೆ ಹೋಗದೆ ಹಾಗೆಯೇ ಓದಿಕೊಂಡುಬಿಡುತ್ತೇವೆ. ಅದರ ಬದಲು, ಅವನ್ನು ತಿಳಿದು ಓದಿದರೆ ನಮಗೆ ಆಯಾ ಬರಹಗಳು ಇನ್ನಷ್ಟು ಸ್ಪಷ್ಟವಾಗಿ ಅರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಅಂತಹ ಅಂಕಿಗಳ ಪದಸಮುಚ್ಚಯದಿಂದ ನಮ್ಮ ದೈನಂದಿನ ಓದಿನ ಬಳಕೆಯಲ್ಲಿರಬಹುದಾದ ಕೆಲವನ್ನು ಆಯ್ದು ಇಲ್ಲಿ ನೀಡಲಾಗಿದೆ. ಈ ಸರಣಿ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಚತುಷ್ಟಯದ ವಿವರಗಳೊಂದಿಗೆ ಪ್ರಕಟಿಸುವ ಯೋಜನೆ ಇದೆ. 

ಅಂಕೆ ನಾಲ್ಕರಿಂದ ಈ ಸರಣಿಯನ್ನು ಆರಂಭಿಸೋಣ. ಈ ಬಾರಿ ಬಹುತೇಕ ‘ಚತುಷ್ಟಯ’ಗಳು ಮತ್ತು ‘ಚತುರ್ವಿಧ’ವನ್ನು ಸೂಚಿಸುವ ಪದ ಸಮುಚ್ಚಯಗಳಿವೆ. 

ವೇದಾಂಗ ಚತುಷ್ಠಯ 
ಮೀಮಾಂಸ, ನ್ಯಾಯ, ಪುರಾಣ, ಸ್ಮ ತಿ

ಅಂತಃಕರಣ ಚತುಷ್ಠಯ
ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ

ಪ್ರಕೃತಿ ಧರ್ಮ ಚತುಷ್ಟಯ 
ಆಹಾರ (ಹಸಿವು), ನಿದ್ರಾ, ಭಯ (ಪ್ರಾಣರಕ್ಷಣೆಗಾಗಿ ಭಯಪಡುವುದು, ಆತ್ಮ ರಕ್ಷಣೆ ಮಾಡಿಕೊಳ್ಳುವುದು), ಮೈಥುನ

ಸಾಧನಾ ಚತುಷ್ಠಯ
ನಿತ್ಯಾನಿತ್ಯ ವಿವೇಕ, ಭೋಗ ವಿರಾಗ, ಸಮಾಧಿ, ಮುಮುಕ್ಷತ್ವ.

ಆಶ್ರಮ ಚತುಷ್ಠಯ 
ಬ್ರಹ್ಮಚಾರಿ, ಗ್ರಹಸ್ಥ, ವಾನಪ್ರಸ್ಥ, ಯತಿ (ಸಂನ್ಯಾಸ)

ಚತುರ್ಸನ
ಸನಕ, ಸನಾತನ, ಸನಂದ, ಸನತ್ಕುಮಾರ

ಚತುರ್ವಿಧ ಪುರುಷಾರ್ಥ
ಧರ್ಮ, ಅರ್ಥ, ಕಾಮ, ಮೋಕ್ಷ

ಚತುರೋಪಾಯ 
ಸಾಮ (ಸಮಾಧಾನ ಪಡಿಸುವುದು), ದಾನ (ಲಂಚ ಕೊಡುವುದು), ಬೇಧ (ಕಲಹ ಹುಟ್ಟಿಸುವುದು), ದಂಡ (ಶಿಕ್ಷಿಸುವುದು)

ಚತುರ್ವಿಧ ವಾದ್ಯ
ತತ (ತಂತಿಯುಳ್ಳದ್ದು), ಆನದ್ಧ (ಚರ್ಮವುಳ್ಳದ್ದು), ಘನ (ಕಂಚು ಮೊದಲಾದ ಲೋಹದ್ದು), ಸಶಿರ (ಊದಿ ಬಾರಿಸುವುದು)

ಚತುರಂಗ ಬಲ
ಹಸ್ತಿ (ಆನೆಯ ಸೈನ್ಯ) , ಆಶ್ವ, ರಥ, ಪದಾತಿ

ಚತುರ್ಯುಗ
ಕೃತ, ತ್ರೇತಾ, ದ್ವಾಪರ, ಕಲಿ

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.