ಹನುಮಾನ್ ಚಾಲೀಸಾ : ಪೂರ್ಣ ಪಾಠ ಮತ್ತು ಸರಳ ಕನ್ನಡಾನುವಾದ

ಸಂತ ತುಳಸೀದಾಸರು ರಚಿಸಿದ ಹನುಮಾನ್ ಚಾಲೀಸಾ ಪೂರ್ಣಪಾಠ ಮತ್ತು ಕನ್ನಡದಲ್ಲಿ ಅದರ ಸರಳಾರ್ಥವನ್ನು ಇಲ್ಲಿ ನೀಡಲಾಗಿದೆ…. 

ದೋಹಾ
ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ |
ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ||
ಶ್ರೀ ಗುರುವಿನ ಚರಣ ಕಮಲಗಳ ದೂಳಿನಿಂದ ಮನವೆಂಬ ಕನ್ನಡಿಯು ಹೇಗೆ ಪವಿತ್ರವಾಗುವುದೋ ಹಾಗೆ ರಘುವರನ ನಿರ್ಮಲ ಯಶೋಗಾಥೆಯ ಸ್ತುತಿಯು ನಮ್ಮನ್ನು ಪವಿತ್ರಗೊಳಿಸುತ್ತದೆ.

ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ |
ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ್ ||
ಹೇ ಪವನ ನಂದನ, ನಿರ್ಮಲ ಮನಸ್ಸಿನಿಂದ ನಾನು ನಿನ್ನ ಸ್ಮರಣೆ ಮಾಡುತ್ತೇನೆ; ನನಗೆ ಬಲ, ಸದ್ಬುದ್ಧಿ ಮತ್ತು ಜ್ಞಾನ ನೀಡು. ನನ್ನ ದುಃಖಗಳನ್ನು ನಾಶ ಮಾಡು.

Hanuman-ji

ಜಯ ಹನುಮಾನ ಙ್ಞಾನ ಗುಣ ಸಾಗರ |
ಜಯ ಕಪೀಶ ತಿಹು ಲೋಕ ಉಜಾಗರ || 1 ||
ಹೇ ಕೇಸರಿ ನಂದನ, ನಿನಗೆ ಜಯವಾಗಲಿ. ವಾನರಶ್ರೇಷ್ಠನೇ, ಲೋಕಾಂತರಗಳಲ್ಲೂ ಖ್ಯಾತನಾದವನೇ ನಿನಗೆ ಜಯವಾಗಲಿ.

ರಾಮದೂತ ಅತುಲಿತ ಬಲಧಾಮಾ |
ಅಂಜನಿ ಪುತ್ರ ಪವನಸುತ ನಾಮಾ || 2 ||
ಪರಮ ಬಲಶಾಲಿಯಾದ ರಾಮದೂತನೇ, ಅಂಜನಿಯ ಸುತನೇ, ಪವನದೇವನ ಪುತ್ರನೇ

ಮಹಾವೀರ ವಿಕ್ರಮ ಬಜರಂಗೀ |
ಕುಮತಿ ನಿವಾರ ಸುಮತಿ ಕೇ ಸಂಗೀ ||3 ||
ಮಹಾವೀರ, ವಿಕ್ರಮನಾದ ಬಜರಂಗಿಯೇ, ದುರ್ಬುದ್ಧಿ ಹೋಗಲಾಡಿಸಿ ಸದ್ಬುದ್ಧಿ ನೀಡುವವನೇ

ಕಂಚನ ವರಣ ವಿರಾಜ ಸುವೇಶಾ |
ಕಾನನ ಕುಂಡಲ ಕುಂಚಿತ ಕೇಶಾ || 4 ||
ಚಿನ್ನದ ಬಣ್ಣದಿಂದ ಕಂಗೊಳಿಸುವವನೇ, ಸುಂದರ ಆಭೂಷಣ ತೊಟ್ಟವನೇ, ಕಿವಿಗೆ ಕುಂಡಲ ಧರಿಸಿರುವ, ಗುಂಗುರು ಕೂದಲಿನವನೇ

ಹಾಥವಜ್ರ ಔ ಧ್ವಜಾ ವಿರಾಜೈ |
ಕಾಂಥೇ ಮೂಂಜ ಜನೇವೂ ಸಾಜೈ || 5||
ವಜ್ರ ಮತ್ತು ಧ್ವಜಗಳನ್ನು ಕೈಯಲ್ಲಿ ಹಿಡಿದು, ಭುಜದಲ್ಲಿ ದರ್ಬೆಯ ಯಜ್ಞೋಪವೀತ ಧರಿಸಿರುವವನೇ

ಶಂಕರ ಸುವನ ಕೇಸರೀ ನಂದನ |
ತೇಜ ಪ್ರತಾಪ ಮಹಾಜಗ ವಂದನ || 6 ||
ಶಂಕರನ ಅವತಾರ, ಕೇಸರಿಯ ಪುತ್ರನೇ, ಅಪ್ರತಿಮ ಪ್ರತಾಪಿಯಾದ ನೀನು ಲೋಕವಂದ್ಯನಾಗಿರುವೆ.

ವಿದ್ಯಾವಾನ ಗುಣೀ ಅತಿ ಚಾತುರ |
ರಾಮ ಕಾಜ ಕರಿವೇ ಕೋ ಆತುರ || 7 ||
ವಿದ್ಯಾವಂತ, ಸದ್ಗುಣಿ, ಅತ್ಯಂತ ಚತುರ, ರಾಮಕಾರ್ಯ ನೆರವೇರಿಸಲು ಸದಾ ಕಾತರಿಸುವವನೇ

ಪ್ರಭು ಚರಿತ್ರ ಸುನಿವೇ ಕೋ ರಸಿಯಾ |
ರಾಮಲಖನ ಸೀತಾ ಮನ ಬಸಿಯಾ || 8||
ಪ್ರಭು ಶ್ರೀರಾಮನ ಚರಿತ್ರೆಯನ್ನು ಕೇಳಿ ಆನಂದಿಸುವ ನಿನ್ನ ಹೃದಯದಲ್ಲೇ ರಾಮ ಸೀತಾ ಲಕ್ಷ್ಮಣರು ನೆಲೆಸಿರುವರು.

ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ |
ವಿಕಟ ರೂಪಧರಿ ಲಂಕ ಜರಾವಾ || 9 ||
ಸಿದ್ಧನಾದ ನೀನು ಅತ್ಯಂತ ಕಿರಿದಾಗಿ ಸೀತೆಗೆ ಕಾಣಿಸಿಕೊಂಡೆ, ಬೃಹದಾಕಾರ ಬೆಳೆದು ಲಂಕೆಯನ್ನೇ ಜ್ವಲಿಸಿದೆ

ಭೀಮ ರೂಪಧರಿ ಅಸುರ ಸಂಹಾರೇ |
ರಾಮಚಂದ್ರ ಕೇ ಕಾಜ ಸಂವಾರೇ || 10 ||
ಭೀಮರೂಪ ಧರಿಸಿ ಅಸುರರನ್ನು ಕೊಂದೆ, ರಾಮಚಂದ್ರನ ಕೆಲಸಕ್ಕೆ ಒದಗಿ ಬಂದೆ

chalisa

ಲಾಯ ಸಂಜೀವನ ಲಖನ ಜಿಯಾಯೇ |
ಶ್ರೀ ರಘುವೀರ ಹರಷಿ ಉರಲಾಯೇ || 11 ||
ಸಂಜೀವನಿ ಪರ್ವತವನ್ನೇ ತಂದು ಲಕ್ಷ್ಮಣನನ್ನು ಬದುಕಿಸಿ ರಘುವೀರ (ಶ್ರೀರಾಮ)ನ ಸಂತೋಷ ಹೆಚ್ಚಿಸಿದೆ.

ರಘುಪತಿ ಕೀನ್ಹೀ ಬಹುತ ಬಡಾಯೀ |
ತುಮ ಮಮ ಪ್ರಿಯ ಭರತಹಿ ಸಮ ಭಾಯೀ || 12 ||
ರಘುಪತಿ ರಾಮನ ಮೆಚ್ಚುಗೆ ಪಡೆದು “ನೀನು ನನ್ನ ತಮ್ಮ ಭರತನಿಗೆ ಸಮ” ಎಂದು ಕರೆಸಿಕೊಂಡೆ.

ಸಹಸ ವದನ ತುಮ್ಹರೋ ಯಶಗಾವೈ |
ಅಸ ಕಹಿ ಶ್ರೀಪತಿ ಕಂಠ ಲಗಾವೈ || 13 ||
ಸಾವಿರಾರು ಕಂಠಗಳು ನಿನ್ನ ಕೊಂಡಾಡಲಿ ಎಂದು ಪ್ರಭು ರಾಮನ ಹಾರೈಕೆಯನ್ನೂ ಪಡೆದೆ

ಸನಕಾದಿಕ ಬ್ರಹ್ಮಾದಿ ಮುನೀಶಾ |
ನಾರದ ಶಾರದ ಸಹಿತ ಅಹೀಶಾ || 14 ||
(ಅಂತೆಯೇ) ಸನಕಾದಿ ಮುನಿಗಳು, ಬ್ರಹ್ಮಾದಿ ದೇವತೆಗಳು, ನಾರದ, ಶಾರದ, ಅಹೀಶರೇ ಮೊದಲಾದವರು ನಿನ್ನ ಕೊಂಡಾಡಿದ್ದಾರೆ.

ಯಮ ಕುಬೇರ ದಿಗಪಾಲ ಜಹಾಂ ತೇ |
ಕವಿ ಕೋವಿದ ಕಹಿ ಸಕೇ ಕಹಾಂ ತೇ || 15 ||
ಯಮ, ಕುಬೇರ ಮೊದಲಾದ ದಿಕ್ಪಾಲಕರೂ ನಿನ್ನ ಗುಣಗಾನ ಮಾಡಿ ತಣಿದಿಲ್ಲ…

ತುಮ ಉಪಕಾರ ಸುಗ್ರೀವಹಿ ಕೀನ್ಹಾ |
ರಾಮ ಮಿಲಾಯ ರಾಜಪದ ದೀನ್ಹಾ || 16 ||
ಸುಗ್ರೀವನಿಗೆ ಶ್ರೀ ರಾಮನ ಭೇಟಿ ಮಾಡಿಸಿ, ಸುಗ್ರೀವ ರಾಜಪದವಿ ಪಡೆಯುವಂತೆ ಮಾಡಿದೆ

ತುಮ್ಹರೋ ಮಂತ್ರ ವಿಭೀಷಣ ಮಾನಾ |
ಲಂಕೇಶ್ವರ ಭಯೇ ಸಬ ಜಗ ಜಾನಾ || 17 ||
ವಿಭೀಷಣನೂ ನಿನ್ನದೇ ಆಲೋಚನೆಗಳನ್ನು ಅನುಸರಿಸಿ ಲಂಕೆಯ ರಾಜನಾದನು. ಇದನ್ನು ಲೋಕ ತಿಳಿದಿದೆ.

ಯುಗ ಸಹಸ್ರ ಯೋಜನ ಪರ ಭಾನೂ |
ಲೀಲ್ಯೋ ತಾಹಿ ಮಧುರ ಫಲ ಜಾನೂ || 18 ||
ಸಾವಿರಾರು ಯೋಜನ ದೂರದಲ್ಲಿರುವ ಸೂರ್ಯನನ್ನು ನೀನು ಸಿಹಿ ಹಣ್ಣೆಂದು ತಿನ್ನಬಯಸಿದೆ

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ |
ಜಲಧಿ ಲಾಂಘಿ ಗಯೇ ಅಚರಜ ನಾಹೀ || 19 ||
(ಇಂತಹಾ ನೀನು) ಶ್ರೀ ರಾಮ ನೀಡಿದ ಮುದ್ರೆಯುಂಗುರ ಹಿಡಿದು ಸಾಗರೋಲ್ಲಂಘನ ಮಾಡಿದ್ದು ಅಚ್ಚರಿಯ ವಿಷಯವೇನಲ್ಲ.

ದುರ್ಗಮ ಕಾಜ ಜಗತ ಕೇ ಜೇತೇ |
ಸುಗಮ ಅನುಗ್ರಹ ತುಮ್ಹರೇ ತೇತೇ || 20 ||
ಎಂಥಾ ಕಠಿಣ ಕೆಲಸವೇ ಆಗಿದ್ದರೂ ಅದು ನಿನ್ನ ಅನುಗ್ರಹದಿಂದ ಸುಗಮವಾಗುವುದು.

hanumanji-1507633700-lb

ರಾಮ ದುಆರೇ ತುಮ ರಖವಾರೇ |
ಹೋತ ನ ಆಙ್ಞಾ ಬಿನು ಪೈಸಾರೇ || 21 ||
ನೀನು ರಾಮನ ಮನೆಯ ದ್ವಾರಪಾಲಕ. ನಿನ್ನ ಅನುಗ್ರಹವಿಲ್ಲದೆ ಯಾರೂ ಆ ಮನೆಯನ್ನು ಪ್ರವೇಶಿಸಲಾರರು.

ಸಬ ಸುಖ ಲಹೈ ತುಮ್ಹಾರೀ ಶರಣಾ |
ತುಮ ರಕ್ಷಕ ಕಾಹೂ ಕೋ ಡರ ನಾ || 22 ||
ನಿಮ್ಮಲ್ಲಿ ಶರಣಾಗತರಾದವರಿಗೆ ಯಾವ ಭಯವೂ ಇರುವುದಿಲ್ಲ. ಎಲ್ಲರನ್ನೂ ನೀನು ರಕ್ಷಿಸುವೆ

ಆಪನ ತೇಜ ತುಮ್ಹಾರೋ ಆಪೈ |
ತೀನೋಂ ಲೋಕ ಹಾಂಕ ತೇ ಕಾಂಪೈ || 23 ||
ನಿನ್ನ ವೇಗವನ್ನು ನೀನೇ ಬಲ್ಲೆ. ನಿನ್ನ ಘರ್ಜನೆಗೆ ಮೂರು ಲೋಕಗಳೂ ನಡುಗುವವು

ಭೂತ ಪಿಶಾಚ ನಿಕಟ ನಹಿ ಆವೈ |
ಮಹವೀರ ಜಬ ನಾಮ ಸುನಾವೈ || 24 ||
ಮಹಾವೀರನಾದ ನಿನ್ನ ನಾಮಜಪದಿಂದ ಭೂತ ಪಿಶಾಚ ಭಾದೆಗಳು ನಾಶವಾಗುವವು

ನಾಸೈ ರೋಗ ಹರೈ ಸಬ ಪೀರಾ |
ಜಪತ ನಿರಂತರ ಹನುಮತ ವೀರಾ || 25 ||
ನಿನ್ನ ನಿರಂತರ ಜಪದಿಂದ ಎಲ್ಲ ರೋಗಗಳೂ ನಾಶವಾಗಿ ಕಷ್ಟಗಳು ದೂರವಾಗುವವು.

ಸಂಕಟ ಸೇಂ ಹನುಮಾನ ಛುಡಾವೈ |
ಮನ ಕ್ರಮ ವಚನ ಧ್ಯಾನ ಜೋ ಲಾವೈ || 26 ||
ನಿನ್ನ ಧ್ಯಾನದಿಂದ ಮನಸ್ಸು ಸ್ಥಿಮಿತಗೊಂಡು ಎಲ್ಲ ವ್ಯವಹಾರಗಳೂ ಸುಗಮವಾಗುವವು

ಸಬ ಪರ ರಾಮ ತಪಸ್ವೀ ರಾಜಾ |
ತಿನಕೇ ಕಾಜ ಸಕಲ ತುಮ ಸಾಜಾ || 27 ||
ತಾಪಸಿಯಾದ ಶ್ರೀ ರಾಮನ ಸೇವೆ ಮಾಡುವುದರಲ್ಲೇ ನೀನು ಸಂತೋಷ ಕಾಣುವವನು.

ಔರ ಮನೋರಧ ಜೋ ಕೋಯಿ ಲಾವೈ |
ತಾಸು ಅಮಿತ ಜೀವನ ಫಲ ಪಾವೈ || 28 ||
ನಿನ್ನ ಕೃಪೆಯಿಂದ ಸಕಲ ಇಷ್ಟಾರ್ಥಗಳು ಪೂರ್ಣಗೊಳ್ಳುವವು. ೂಹೆಗೂ ಮೀರಿದ ಫಲಗಳು ದೊರೆಯುವವು.

ಚಾರೋ ಯುಗ ಪರಿತಾಪ ತುಮ್ಹಾರಾ |
ಹೈ ಪರಸಿದ್ಧ ಜಗತ ಉಜಿಯಾರಾ || 29 ||
ನಾಲ್ಕು ಯುಗಗಳಲ್ಲೂ ನೀನು ನಿನ್ನ ಪ್ರತಾಪ ತೋರಿರುವೆ. ಲೋಕ ಪ್ರಸಿದ್ಧನಾದ ನಿನ್ನನ್ನು ಎಲ್ಲರೂ ಪೂಜಿಸುವರು.

ಸಾಧು ಸಂತ ಕೇ ತುಮ ರಖವಾರೇ |
ಅಸುರ ನಿಕಂದನ ರಾಮ ದುಲಾರೇ || 30 ||
ಸಾಧುಸಂತರನ್ನು ನೀನು ರಕ್ಷಿಸುವೆ

Hanuman

ಅಷ್ಠಸಿದ್ಧಿ ನವ ನಿಧಿ ಕೇ ದಾತಾ |
ಅಸ ವರ ದೀನ್ಹ ಜಾನಕೀ ಮಾತಾ || 31 ||
ಅಷ್ಟಸಿದ್ಧಿಗಳನ್ನು ಕರಗತ ಮಾಡಿಕೊಂಡಿರುವ ನೀನು, ಅವುಗಳ ಸಹಾಯದಿಂದ ಸೀತಾಮಾತೆಯನ್ನು ತಲುಪಿದೆ.

ರಾಮ ರಸಾಯನ ತುಮ್ಹಾರೇ ಪಾಸಾ |
ಸಾದ ರಹೋ ರಘುಪತಿ ಕೇ ದಾಸಾ || 32 ||
ರಾಮನಾಮ ರಸಾಯನಕ್ಕಾಗಿ ಸದಾ ಬಾಯಾರಿದ ನೀನು ರಘುಪತಿ ರಾಮನ ಶ್ರೇಷ್ಠ ದಾಸನಾಗಿರುವೆ.

ತುಮ್ಹರೇ ಭಜನ ರಾಮಕೋ ಪಾವೈ |
ಜನ್ಮ ಜನ್ಮ ಕೇ ದುಖ ಬಿಸರಾವೈ || 33 ||
ನಿನ್ನ ಭಜನೆ ಮಾಡುವ ಮೂಲಕ ಭಕ್ತರು ಪ್ರಭು ರಾಮನನ್ನು ತಲುಪುವರು ಮತ್ತು ಜನ್ಮಾಂತರಗಳ ದುಃಖದಿಂದ ಮುಕ್ತರಾಗುವರು.

ಅಂತ ಕಾಲ ರಘುವರ ಪುರಜಾಯೀ |
ಜಹಾಂ ಜನ್ಮ ಹರಿಭಕ್ತ ಕಹಾಯೀ || 34 ||
ಅಂತ್ಯಕಾಲದಲ್ಲಿ ನಿನ್ನ ಭಜನೆ ಮಾಡುವವರು ಖಚಿತವಾಗಿ ರಾಮಧಾಮವನ್ನು ಹೊಂದುವರು. ಮತ್ತು ಎಲ್ಲಿ ಪುನರ್ಜನ್ಮ ಪಡೆದರೂ ಹರಿಭಕ್ತನೆಂದೇ ಗುರುತಿಸಲ್ಪಡುವರು.

ಔರ ದೇವತಾ ಚಿತ್ತ ನ ಧರಯೀ |
ಹನುಮತ ಸೇಯಿ ಸರ್ವ ಸುಖ ಕರಯೀ || 35 ||
ಕೇವಲ ಹನುಮನನ್ನು ಮನಸಿನಲ್ಲಿಟ್ಟುಕೊಂಡು ಭಕ್ತಿಯಿಂದ ಭಜಿಸಿದರೆ ಸಕಲ ಸುಖಗಳೂ ದೊರೆಯುವವು

ಸಂಕಟ ಕಟೈ ಮಿಟೈ ಸಬ ಪೀರಾ |
ಜೋ ಸುಮಿರೈ ಹನುಮತ ಬಲ ವೀರಾ || 36 ||
ಬಲವೀರನಾದ ಹನುಮ ಭಜನೆಯಿಂದ ಎಲ್ಲ ಬಗೆಯ ಸಂಕಟ ನಿವಾರಣೆಯಾಗುವವು

ಜೈ ಜೈ ಜೈ ಹನುಮಾನ ಗೋಸಾಯೀ |
ಕೃಪಾ ಕರೋ ಗುರುದೇವ ಕೀ ನಾಯೀ || 37 ||
ಇಂತಹಾ ಹನುಮ ಗುರುವಿಗೆ ನಾನು ಜಯಕಾರ ಹಾಕುತ್ತೇನೆ

ಜೋ ಶತ ವಾರ ಪಾಠ ಕರ ಕೋಯೀ |
ಛೂಟಹಿ ಬಂದಿ ಮಹಾ ಸುಖ ಹೋಯೀ || 38 ||
ಈ ಹನುಮಾನ್ ಚಾಲೀಸಾವನ್ನು ಯಾರು ನೂರು ಬಾರಿ ಪಠಿಸುವರೋ ಅವರು ಸಂಸಾರ ಕ್ಲೇಶಗಳಿಂದ ಮುಕ್ತರಾಗಿ ಪರಮಾನಂದ ಹೊಂದುವರು.

ಜೋ ಯಹ ಪಡೈ ಹನುಮಾನ ಚಾಲೀಸಾ |
ಹೋಯ ಸಿದ್ಧಿ ಸಾಖೀ ಗೌರೀಶಾ || 39 ||
ಹನುಮಾನ ಚಾಲೀಸಾ ನಿತ್ಯ ಪಠಿಸುವವರು ಸಿದ್ಧಿಗಳನ್ನು ಪಡೆಯುವರು.

ತುಲಸೀದಾಸ ಸದಾ ಹರಿ ಚೇರಾ |
ಕೀಜೈ ನಾಥ ಹೃದಯ ಮಹ ಡೇರಾ || 40 ||
ಹರಿಭಕ್ತನಾದ ತುಳಸೀದಾಸನ ಹೃದಯದಲ್ಲಿ ಹನುಮನು ಸದಾ ನೆಲೆಸಿರುವನು.

ದೋಹಾ
ಪವನ ತನಯ ಸಂಕಟ ಹರಣ – ಮಂಗಳ ಮೂರತಿ ರೂಪ್ |
ರಾಮ ಲಖನ ಸೀತಾ ಸಹಿತ – ಹೃದಯ ಬಸಹು ಸುರಭೂಪ್ ||
ಸಿಯಾವರ ರಾಮಚಂದ್ರಕೀ ಜಯ | ಪವನಸುತ ಹನುಮಾನಕೀ ಜಯ | ಬೋಲೋ ಭಾಯೀ ಸಬ ಸಂತನಕೀ ಜಯ |

Leave a Reply