ನೀವು ಚೆನ್ನಾಗಿಲ್ಲ ಅಂದ್ರೆ ತಲೆ ಕೆಡಿಸ್ಕೊಳ್ಬೇಡಿ, ಅದು ನೋಡುಗರ ಕೊರತೆ : ಅರಳಿಮರ Audio

“ನಾನು ನೋಡ್ಲಿಕ್ಕೆ ಚೆನ್ನಾಗಿಲ್ಲ. ಅದಕ್ಕೇ ನನ್ ಮಗಳು ನನ್ ಜೊತೆ ಹೊರಗೆ ಓಡಾಡೋಕೆ ಹಿಂಜರೀತಾಳೆ. ಯಾರಿಗೂ ಪರಿಚಯ ಮಾಡಿಸೋದಿಲ್ಲ. ಇದೆಲ್ಲ ನನಗೆ ನೋವು ತಂದಿದೆ. ಇದನ್ನು ಮೀರೋದು ಹೇಗೆ” ಅಂತ ಮಹಿಳೆಯೊಬ್ಬರು ಪ್ರಶ್ನೆ ಕೇಳಿದ್ದರು. ಯಾವುದನ್ನು ಹೇಗೆ ನೋಡಬೇಕು ಅನ್ನೋದು ಅಂತರಂಗಕ್ಕೆ ಸಂಬಂಧಿಸಿದ್ದು. ಪ್ರತಿ ವ್ಯಕ್ತಿಯ ವೈಯಕ್ತಿಕ ಆಲೋಚನಾಕ್ರಮದ ಮೇಲೆ ಅವಲಂಬಿತವಾಗಿರುವಂಥದ್ದು. ಈ ವಿಷಯದಲ್ಲಿ ನೀವು ಇದನ್ನು ಹೀಗೇ ನೋಡಬೇಕು ಎಂದು ನಿರ್ದೇಶಿಸಲಾಗಲೀ ಬೋಧಿಸಲಾಗಲೀ ಬರುವುದಿಲ್ಲ. ಆದರೆ ನಮ್ಮ ನೋಟವನ್ನು ಆರೋಗ್ಯಪೂರ್ಣವಾಗಿರಿಸಿಕೊಳ್ಳಬಲ್ಲ ಚಿಂತನೆ ಇದು ಎಂದು ಬೆರಳು ತೋರಬಹುದು. ಅಂತಹ ಒಂದು ಚಿಕ್ಕ ಪ್ರಯತ್ನ ಇಲ್ಲಿದೆ; ಆಡಿಯೋ ಕೇಳಿ. 

 

Leave a Reply