ಗಿಬ್ರಾನ್ ಹೇಳುತ್ತಾನೆ; ‘ಸುಖ’ ಎಂದರೆ….

ಮೂಲ : ಖಲೀಲ್ ಗಿಬ್ರಾನ್, ‘ಪ್ರವಾದಿ’ ಕೃತಿ | ಭಾವಾನುವಾದ : ಚಿದಂಬರ ನರೇಂದ್ರ

ಸುಖ, ಸ್ವಾತಂತ್ರ್ಯದ ಹಾಡು
ಆದರೆ ಅದೇ ಸ್ವಾತಂತ್ರ್ಯವಲ್ಲ.
ಸುಖ, ನಿಮ್ಮ ಬಯಕೆಗಳ ಅರಳುವಿಕೆ.
ಆದರೆ ಬಯಕೆಗಳ ಫಲವಲ್ಲ.
ಸುಖ, ಆಳ ಎತ್ತರವನ್ನು ಕೂಗಿ ಕರೆಯುವ ಛಂದ,
ಆದರೆ ಅದೇ ಆಳ, ಅದೇ ಎತ್ತರವಲ್ಲ.

ಸುಖ, ರೆಕ್ಕೆ ಬಿಚ್ಚುತ್ತಿರುವ ಪಂಜರದ ಹಕ್ಕಿ,
ಆದರೆ ಅದು ಸುತ್ತುವರೆದ ಅವಕಾಶವಲ್ಲ.

ತೋಟಕ್ಕೆ ಹೋಗಿ ನೋಡಿ;
ನಿಮಗೇ ಅರಿವಾಗುತ್ತದೆ…
ದುಂಬಿಗೆ ಹೂವಿನಿಂದ ಜೇನು ಹೀರುವುದೇ ಸುಖ
ಹೂವಿಗೆ, ದುಂಬಿಗಾಗಿ ಜೇನು ತುಂಬಿಕೊಳ್ಳುವುದೇ ಸುಖ.
ದುಂಬಿಗೆ ಹೂವು, ಬದುಕಿನ ಕಾರಂಜಿ
ಹೂವಿಗೆ ದುಂಬಿ, ಪ್ರೇಮದ ಹರಿಕಾರ.

ಹೂವು, ದುಂಬಿ ಎರಡಕ್ಕೂ
ಕೊಡುವುದು ಮತ್ತು ಪಡೆದುಕೊಳ್ಳುವುದು
ಎರಡೂ ಪರಮ ಅವಶ್ಯಕತೆ
ಮತ್ತು 
ಭಾವ ಪರವಶತೆಯ ವಿಷಯಗಳು.

ಹೂವಿನಂತೆ, ದುಂಬಿಯಂತೆ ನಿಮ್ಮ ಸುಖಗಳನ್ನು ಕಂಡುಕೊಳ್ಳಿ.

Leave a Reply