ಯೋಗ ವಾಸಿಷ್ಠ ರಚಿಸಿದವರು ಯಾರು? ಈ ಕೃತಿ ಯಾವುದರ ಕುರಿತಾಗಿದೆ?

ಆಖ್ಯಾನ – ಉಪಾಖ್ಯಾನಗಳ ಮೂಲಕ ಬ್ರಹ್ಮತತ್ತ್ವವನ್ನು ಬೋಧಿಸುವುದು ಯೋಗ ವಾಸಿಷ್ಠ ಕೃತಿಯ ವೈಶಿಷ್ಟ್ಯ. ಇದಕ್ಕೆ ಮಹಾ ರಾಮಾಯಣ, ಆರ್ಷ ರಾಮಾಯಣ, ವಸಿಷ್ಠ ರಾಮಾಯಣ, ಜ್ಞಾನ ವಸಿಷ್ಠ ರಾಮಾಯಣ ಎಂಬ ಇತರ ಹೆಸರುಗಳೂ ಇವೆ.

ಯೋಗ ವಾಸಿಷ್ಠದ ರಚನೆಕಾರ ವಾಲ್ಮೀಕಿ ಮಹರ್ಷಿಗಳು. ರಾಮ ಮತ್ತು ರಘುವಂಶದ ಕುಲಗುರು ವಸಿಷ್ಠರ ನಡುವೆ ನಡೆದ ಆಧ್ಯಾತ್ಮಿಕ ಸಂಭಾಷಣೆಯೇ ಯೋಗ ವಾಸಿಷ್ಠದ ತಿರುಳು. ಜ್ಞಾನ ಮತ್ತು ಸ್ವರೂಪದಲ್ಲಿ ಇದನ್ನು ಭಗವದ್ಗೀತೆಗೆ ಹೋಲಿಸಲಾಗುತ್ತದೆ. ವಿಶೇಷವಾಗಿ ಇದು ಅದ್ವೈತಸಿದ್ಧಾಂತವನ್ನು ಮನದಟ್ಟು ಮಾಡಿಸುವ ಕೃತಿಯಾಗಿದೆ. ‘ಈ ಜೀವನ. ಈ ರಾಜ್ಯ ಇದೆಲ್ಲ ಯಾಕೆ ಬೇಕು?’ ಎಂದು ಶ್ರೀರಾಮ ವೈರಾಗ್ಯ ತಳೆದಾಗ ವಸಿಷ್ಠರು ಇದನ್ನು ಬೋಧಿಸಿದರೆಂದು ಪ್ರತೀತಿ.

ವಿವಿಧ ಪಾಠಾಂತರಗಳಂತೆ ಸುಮಾರು 29,000 ರಿಂದ 32,000ದಷ್ಟು ಶ್ಲೋಕಗಳುಳ್ಳ ಯೋಗವಾಸಿಷ್ಠ, 6,000 ಶ್ಲೋಕಗಳ ಪರಿಷ್ಕೃತ ರೂಪದಲ್ಲಿಯೂ ಲಭ್ಯವಿದೆ. ಇದನ್ನು ‘ಲಘು ಯೋಗ ವಾಸಿಷ್ಠ’ ಎಂದು ಕರೆಯಲಾಗುತ್ತದೆ. ಯೋಗ ವಾಸಿಷ್ಠವು ಆರು  ಸಂಪುಟಗಳಲ್ಲಿ ನಿರೂಪಿಸಲ್ಪಟ್ಟಿದ್ದು, ಪ್ರತಿಯೊಂದು ಸಂಪುಟವನ್ನೂ’ಪ್ರಕರಣ’ವೆಂದು ಕರೆಯಲಾಗಿದೆ. ವೈರಾಗ್ಯ ಪ್ರಕರಣ, ಮುಮುಕ್ಷುವ್ಯವಹಾರ ಪ್ರಕರಣ, ಉತ್ಪತ್ತಿ ಪ್ರಕರಣ, ಸ್ಥಿತಿ ಪ್ರಕರಣ, ಉಪಶಮನ ಪ್ರಕರಣ ಮತ್ತು ನಿರ್ವಾಣ ಪ್ರಕರಣ – ಇವೇ ಆ 6 ಪ್ರಕರಣಗಳು.  

ಆಖ್ಯಾನ – ಉಪಾಖ್ಯಾನಗಳ ಮೂಲಕ ಬ್ರಹ್ಮತತ್ತ್ವವನ್ನು ಬೋಧಿಸುವುದು ಯೋಗ ವಾಸಿಷ್ಠ ಕೃತಿಯ ವೈಶಿಷ್ಟ್ಯ. ಇದಕ್ಕೆ ಮಹಾ ರಾಮಾಯಣ, ಆರ್ಷ ರಾಮಾಯಣ, ವಸಿಷ್ಠ ರಾಮಾಯಣ, ಜ್ಞಾನ ವಸಿಷ್ಠ ರಾಮಾಯಣ ಎಂಬ ಇತರ ಹೆಸರುಗಳೂ ಇವೆ.

1 Comment

Leave a Reply to ವಿಚಾರಶೀಲತೆ: ಕುರುಡು ನಂಬಿಕೆಯ ಕಗ್ಗತ್ತಲಲ್ಲಿ ದಾರಿ ತೋರುವ ಕಂದೀಲು ~ ಯೋಗ ವಾಸಿಷ್ಠ – ಅರಳಿಮರCancel reply